ಭಟ್ಕಳ, ಅಕ್ಟೋಬರ್ 21: ಮಂಗಳವಾರ ರಾತ್ರಿ ನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಎದುರು ಎರೆಡು ಬೈಕುಗಳು ಮುಖಾಮುಖಿ ಗುದ್ದಿಕೊಂಡಿದ್ದ ಪರಿಣಾಮವಾಗಿ ಇಬ್ಬರೂ ಸವಾರರಿಗೆ ಗಂಭೀರರೀತಿಯ ಗಾಯಗಳಾಗಿವೆ.
ಮುರ್ಡೇಶ್ವರದಿಂದ ಭಟ್ಕಳದ ಕಡೆಗೆ ಬರುತ್ತಿದ್ದ ನವಾಯತ ಕಾಲೋನಿಯ ನೂರುಲ್ಲಾ ಅಮೀನ್ ತಿರುವಿನಲ್ಲಿ ಯಾವುದೇ ಸಂಕೇತ ತೋರದೇ ಮುನ್ನುಗ್ಗಿದ್ದಾಗ ಮುಂಬದಿಯಿಂದ ಬರುತ್ತಿದ್ದ ಚಿತ್ರಾಪುರದ ನಿವಾಸಿ ಮಾದೇವ ನಾರಾಯಣರವರ ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ. ಇಬ್ಬರ ತಲೆಗೂ ಗಂಭೀರವಾದ ಗಾಯಗಳಾಗಿವೆ.
ನಿಯಮವನ್ನು ಗಾಳಿಗೆ ತೂರಿದ್ದೇ ಈ ಅಪಘಾತಕ್ಕೆ ಕಾರಣ ಎಂದು ದೂರು ನೀಡಲಾಗಿದ್ದು ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.