ಮಂಗಳೂರು,ಫೆ.25: ರಾಜ್ಯಸರಕಾರ ಹೊರಡಿಸಿರುವ ಸಂಪೂರ್ಣ ಗೋಹತ್ಯೆ ನಿಷೇಧ ಕಾಯಿದೆ ಯನ್ನು ವಿರೋಧಿಸಿ ಕರ್ನಾಟಕ ಕೋಮು ಸೌಹರ್ದ ವೇದಿಕೆ ವತಿಯಿಂದ 'ಬ್ರಹತ್ ರ್‍ಯಾಲಿ ಮತ್ತು ಪ್ರತಿಭಟನಾ ಸಭೆ' ಯು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ನಡೆಯಿತು.
ಭಾರತೀಯ ಆಹಾರ ಪದ್ಧತಿಯ ರಕ್ಷಣಾ ಅಂದೋಲನ ಹಮ್ಮಿಕೊಂಡಿರುವ ಈ ಪ್ರತಿಭಟನಾ ಸಭೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದವು. ಹಾಗೂ ಸಮಾನ ಮನಸ್ಕ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಮೊದಲಿಗೆ ನಗರದ ಅಂಬೇಡ್ಕರ್ ವ್ರತ್ತ ದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು.
ಹಿರಿಯ ವಿಚಾರವಾದಿಗಳು, ರಾಜಕೀಯ ನೇತಾರರು ಆದ ಎ.ಕೆ ಸುಬ್ಬಯ್ಯ ಅವರು ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಅವರೇ ಬರೆದ "ಗೋಮುಖ ವ್ಯಾಘ್ರಗಳಿಂದ ನಾಡನ್ನು ರಕ್ಷಿಸೋಣ" ಎಂಬ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಪ್ರಸ್ತಾವನೆಗೈದ ಕರ್ನಾಟಕ ಕೋಮು ಸೌಹರ್ದ ವೇದಿಕೆಯ ದ.ಕ ಜಿಲ್ಲಾ ಗೌರವಾಧ್ಯ ಕ್ಷರಾದ ಪಟ್ಟಾಭಿರಾಮ ಸೋಮಯಾಜಿ ಅವರು ಗೋಹತ್ಯೆ ಕಾನೂನು ರದ್ದಾಗಲಿ, ಈ ಕಾಯಿದೆ ಯನ್ನು ಹೊರಡಿಸಿರುವ ಬಿ.ಜೆ.ಪಿ ಸರಕಾರ ಕೆಳಗಿಳಿಯಲಿ ಎಂದು ಘೋಷಣೆ ಕೂಗಿದರು. ಕರ್ನಾಟಕ ಕೋಮು ಸೌಹರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಆಶೋಕ್ ಸಭೆಯ ಅಧ್ಯಕ್ಷತೆ ವಹಿಸಿ ಸಮಾವೇಶದ ನಿರ್ಣಯಾ ಘೋಷನೆ ಮಾಡಿದರು,
ಕೋ. ಸೌ.ವೇದಿಕೆಯಾ ಕೇಂದ್ರ ಸಮಿತಿ ಸದಸ್ಯರಾದ ಶಿವ ಸುಂದರ್, ನ್ಯಾಯವಾದಿ ಬಿ.ಎ ಮಹಮ್ಮದ್, ಹನೀಫ್, ದ.ಸಂ ಸ.ನಾಯಕ್ ಜಯನ್ ಮಲ್ಪೆ, ಉದ್ಯಾವರ ಚರ್ಚ್ ಧಮಗುರು ಗಳಾದ ರೆ.ಫಾ ವಿಲಿಯಂ ಮಾರ್ಟಿಸ್ ಮೊದಲಾದವರು ಮುಖ್ಯ ಭಾಷಣ ಮಾಡಿದರು.
ಪ್ರೊ| ಬಿ.ಗಂಗಾಧರ ಮೂರ್ತಿ, ಜಿ.ರಾಜಶೇಖರ್, ಅನಂದ ಬೆಳ್ಳಾರೆ, ಆಲೀ ಹಸನ್, ದೀಪಕ್ ಶಶಿಧರ್ ಹೆಮ್ಮಾಡಿ, ಅಲ್ವಿನ್ ಕುಲಾಸೋ, ಯಾಸೀನ್ ಮಲ್ಯೆ, ಪಿ.ಬಿ.ಡೇಸಾ, ರೆ|ಫಾ| ಓನಿಲ್ ಡಿ’ಸೋಜಾ, ಶರೀಫ್ ಬಜಪೆ, ನಿರ್ಮಲ್ ಕುಮಾರ್, ಪ್ರಶಾಂತ್ ಜತ್ತನ್ನ, ಅಮೀರ್ ಹಂಝ, ಡೆನಿಸ್ ಡಿ’ಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಸಂಚಾಲಕರು ಎಸ್.ಪಿ ಆನಂದ ಸ್ವಾಗತಿಸಿದರು. ಕರ್ನಾಟಕ ಕೋಮು ಸೌಹರ್ದ ವೇದಿಕೆಯ ಖಜಾಂಚಿ ಇಸ್ಮತ್ ಫಜೀರ್ ವಂದಿಸಿದರು, ಕ.ಕೋ.ಸೌ.ವೇದಿಕೆ ಉಡುಪಿಯ ದಿನಕರ್ ಎಸ್. ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.
ಸೌಜನ್ಯ: ಮಂಗಳೂರು ಟುಡೇ.