ಭಟ್ಕಳ, ನವೆಂಬರ್ 1: ಭಟ್ಕಳ ಸರಕಾರಿ ಕಾಲೇಜಿನಲ್ಲಿ ಮುಸ್ಲೀಮ್ ಯುವತಿಯರಿಗೆ ಬುರ್ಖಾ ಧರಿಸದಂತೆ ಬೆದರಿಕೆ ಹಾಕಿರುವುದರ ಹಿಂದೆ ತನ್ನ ಕೈವಾಡವಿಲ್ಲ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಭಟ್ಕಳ ಘಟಕ ಹೇಳಿದೆ.
ರವಿವಾರ ಕರೆದ ತುರ್ತು ಪತ್ರಿಕಾ ಗೋಷ್ಠಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಸಂಘಟನೆಯ ಸದಸ್ಯರುಗಳು, ಪತ್ರಿಕೆಯೊಂದರಲ್ಲಿ ತಮ್ಮ ಸಂಘಟನೆಯ ಹೆಸರು ಪ್ರಸ್ತಾಪವಾಗಿದೆ. ಸಂಘಟನೆಯು ಶೈಕ್ಷಣಿಕ ಹಾಗೂ ರಾಷ್ಟ್ರೀಯ ವಿಚಾರಕ್ಕಷ್ಟೇ ಸೀಮಿತವಾಗಿ ಹೋರಾಟ ನಡೆಸುತ್ತದೆ. ನಮ್ಮ ಸಂಘಟನೆಯಲ್ಲಿ ಎಲ್ಲ ಧರ್ಮೀಯರೂ ಪಾಲ್ಗೊಳ್ಳುತ್ತಿದ್ದು, ಸಂಘಟನೆಯಲ್ಲಿ ಒಡಕು ಮೂಡಿಸಲು ಕೆಲವರು ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಶಂಕೆ ಇದೆ ಎಂದು ವಿವರಿಸಿದರು. ಕಾಲೇಜುಗಳಲ್ಲಿ ನಡೆಯುವ ಕಾನೂನು ಬಾಹೀರ ಕೃತ್ಯವನ್ನು ಸಂಘಟನೆಯು ಖಂಡಿಸುತ್ತಿದ್ದು, ಈಗಾಗಲೇ ಕಾಲೇಜು ಪ್ರಾಚಾರ್ಯರಿಗೆ ಮೌಖಿಕ ದೂರನ್ನು ನೀಡಲಾಗಿದೆ ಎಂದ ಅವರು ತಮ್ಮ ಸಂಘಟನೆಯು ಕಿರುಕುಳಕ್ಕೊಳಗಾದ ಯುವತಿಯರ ಪರ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಎಬಿವಿಪಿ ಭಟ್ಕಳ ಸಂಚಾಲಕ ಮಂಜಪ್ಪ ನಾಯ್ಕ, ನಗರ ಕಾರ್ಯದರ್ಶಿ ಗಣೇಶ ವೆಂಕಟೇಶ ದೇವಾಡಿಗ, ಸಹ ಕಾರ್ಯದರ್ಶಿ ವೆಂಕಟೇಶ ದೇವಾಡಿಗ, ಪ್ರಭಾಕರ, ವೆಂಕಟ್ರಮಣ, ವಿವೇಕ, ಹರೀಶ, ರವಿಚಂದ್ರ, ಸಂತೋಷ, ಶಿವಾನಂದ ಮುಂತಾದವರು ಪಾಲ್ಗೊಂಡಿದ್ದರು.