ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮು೦ಬೈ: ಡಿ.22ರಿಂದ ಮುಷ್ಕರ: ಏರಿಂಡಿಯಾ ನೌಕರರ ಒಕ್ಕೂಟ ಎಚ್ಚರಿಕೆ

ಮು೦ಬೈ: ಡಿ.22ರಿಂದ ಮುಷ್ಕರ: ಏರಿಂಡಿಯಾ ನೌಕರರ ಒಕ್ಕೂಟ ಎಚ್ಚರಿಕೆ

Wed, 16 Dec 2009 15:40:00  Office Staff   S.O. News Service
ಮುಂಬೈ, ಡಿಸೆಂಬರ್ 16: ನೌಕರರಿಗೆ ನೀಡಿರುವ ಸವಲತ್ತುಗಳನ್ನು ಹಿಂತೆಗೆದುಕೊಳ್ಳದಿರುವಂತೆ ಆಗ್ರಹಿಸಿ ಡಿ. 22ರಿಂದ ಮುಷ್ಕರ ನಡೆಸುವುದಾಗಿ ಏರಿಂಡಿಯಾ ನೌಕರರ ಸಂಘ ಎಚ್ಚರಿಕೆ ನೀಡಿದೆ. ಇಂಡಿಯ ನ್ ಏರ್‌ಲೈನ್ಸ್ ಒಕ್ಕೂಟ ಮತ್ತು ವಿಮಾನಯಾನ ನಿಗಮದ ನೌಕರರ ಒಕ್ಕೂಟ ಈ ಮುಷ್ಕರಕ್ಕೆ ಕರೆ ಕೊಟ್ಟಿವೆ.

ನೌಕರರಿಗೆ ಏರ್‌ಇಂಡಿಯಾ ನೀಡಿರುವ ಕೆಲ ಸವಲತ್ತುಗಳನ್ನು ಜ.೧ರಿಂದ ಹಿಂತೆಗೆದುಕೊಳ್ಳುವ ಆಡಳಿತ ಮಂಡಳಿ ನಿರ್ಧಾರವನ್ನು ವಿರೋಧಿಸಿ ಈ ಮುಷ್ಕರ ನಡೆಸಲಾಗುತ್ತಿದ್ದು, ಈ ಸಂಬಂಧ ಏರಿಂಡಿಯಾ ಆಡಳಿತ ಮಂಡಳಿಗೆ ಡಿ.7 ರಂದೇ ನೋಟಿಸ್ ನೀಡಲಾಗಿದೆ. ಆಡಳಿತ ಮಂಡಳಿ ನೌಕರರ ಜತೆಗಿನ ಒಪ್ಪಂದವನ್ನು ಕಡೆಗಣಿಸಿದೆ ಎಂದು ಒಕ್ಕೂಟ ಆರೋಪಿಸಿದೆ.
 
ಸೌಜನ್ಯ: ಕನ್ನಡಪ್ರಭ 

Share: