ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಬಾವಿಗೆ ಬಿದ್ದಿದ್ದ ಗೋವನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕಾರವಾರ: ಬಾವಿಗೆ ಬಿದ್ದಿದ್ದ ಗೋವನ್ನು ರಕ್ಷಿಸಿದ ಅಗ್ನಿಶಾಮಕ ದಳ

Thu, 04 Feb 2010 17:11:00  Office Staff   S.O. News Service
ಕಾರವಾರ, ಫೆಬ್ರವರಿ 4: ಸಾವು ಕೆಲವೊಮ್ಮೆ ಹುಡುಕಿ ಬರುತ್ತೆ. ಕೆಲವೊಮ್ಮೆ ತಾನಾಗಿ ಬರುತ್ತೇ. ಆದ್ರೇ ಸಾವು ಮತ್ತು ಬದುಕು ಎರಡನ್ನು ಗಟ್ಟಿಯಾಗಿ ಹಿಡಿದುಕೊಂಡು  17 ಗಂಟೆಯಿಂದ  ಒತ್ತಾಡುತ್ತಿದ್ದ ಮೂಕ ಪ್ರಾಣಿ ಬದುಕಿ ಬಂದಿದೆ. ಈ ಪ್ರಾಣಿಯ ಪ್ರಾಣ ಉಳಿಸುವಲ್ಲಿ ಕಾರಣರಾದವರು ಕಾರವಾರದ ಅಗ್ನಿಶಾಮಕ ದಳ ಸಿಬ್ಬಂಧಿಗಳು. ಅರ್ಧ ಗಂಟೆಯ  ಯಶಸ್ವಿ ಕಾರ್ಯಾಚರಣೆಯ ಮೂಲಕ ಮೂಖ ಪ್ರಾಣ ಉಳಿಸಿದ್ದಾರೆ. 
 
4-kwr2.jpg
4-kwr3.jpg 
 
 
ಈ ಘಟನೆ ನಡೆದದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮೇಲಿನ ಮಕ್ಕೇರಿಯಲ್ಲಿ. ಇಲ್ಲಿನ  ಗೋದಾವರಿ ನಾಯ್ಕ ಎಂಬುವವರ ಮನೆಯ ಬಾವಿಯಲ್ಲಿ ನಿನ್ನೆ ರಾತ್ರಿ ಸುಮಾರು 12 ಗಂಟೆ ವೇಳೆಗೆ ಆಕಳೊಂದು ಬಿದ್ದಿತ್ತು. ಆದರೆ ಬಾವಿಯಲ್ಲಿ ಬಿದ್ದ ಈ ಆಕಳು ಯಾರ ಗಮನಕ್ಕೂ ಬರಲಿಲ್ಲ. ಮನೆಯಲ್ಲಿ ವೃದ್ಧೆಯೊಬ್ಬಳೇ ಇದ್ದದರಿಂದ ಲಕ್ಷ ವಹಿಸಲಿಲ್ಲ. ಮನೆಯ ತೆಂಗಿನ ಮರದಿಂದ ಬಿದ್ದ ಕಾಯಿ ಶಬ್ಧ ವೃದ್ಧೆಯ ಗಮನ ಸೆಳೆಯಿತು. ತೆಂಗಿನಕಾಯಿ ಸಿಗದಿದ್ದಾಗ ಬಾವಿಯನ್ನು ನೋಡಿದಳು. ಆಗ ಆಕಳೊಂದು ಒತ್ತಾಡುತ್ತಿದ್ದದ್ದು ಕಂಡುಬಂತು. ಕೂಡಲೇ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದರು. ಆಗ ಬಂದ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಅರ್ಧ ಗಂಟೆಯಲ್ಲಿ ಯಶಸ್ವಿ ಕಾರ್ಯಾಚರಣೆ ಮೂಲಕ ಆಕಳನ್ನು ಬಾವಿಯಿಂದ ಎತ್ತಿದರು.


Share: