ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ರೈಲು ಹಳಿ ಸಮೀಪ ಯುವಕನ ಮೃತದೇಹ ಪತ್ತೆ

ಭಟ್ಕಳ: ರೈಲು ಹಳಿ ಸಮೀಪ ಯುವಕನ ಮೃತದೇಹ ಪತ್ತೆ

Tue, 17 Sep 2024 23:56:20  Office Staff   SOnews

 

ಭಟ್ಕಳ: ತಾಲೂಕಿನ ಯಲ್ವಡಿಕವೂರ್ ಗ್ರಾ.ಪಂ ವ್ಯಾಪ್ತಿಯ ಸೋಡಿಗದ್ದೆ ಕ್ರಾಸ್ ರೈಲ್ವೆ ಹಳಿಯ ಬಳಿ ಎರಡು ಕಾಲು ತುಂಡಾಗಿರುವ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಮಂಗಳವಾರ ಬೆಳಿಗ್ಗೆ  ಪತ್ತೆಯಾಗಿದೆ.

ಮೃತದೇಹವನ್ನು ಗಿರೀಶ್ ಪಾಂಡು ಜೋಗಿ ಎಂದು ಗುರುತಿಲಸಾಗಿದೆ. ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.  ರೈಲು ಡಿಕ್ಕಿಯಾದ ರಭಸಕ್ಕೆ ಯುವಕನ ಎರಡೂ ಕಾಲುಗಳು ತುಂಡಾಗಿವೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೋಮವಾರ ಸಂಜೆ ಗಿರೀಶ್ ಮನೆಯಿಂದ ತೆರಳಿದ್ದನು ಎನ್ನಲಾಗಿದೆ. ಈತ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದ್ದು ಈ ಘಟನೆ ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.  


Share: