ಭಟ್ಕಳ, ಅಕ್ಟೋಬರ್ 28: ಜಾತಿ ವೈಷಮ್ಯಕ್ಕೆ ತಿರುಗಿದ ಭಟ್ಕಳ ಗಲಭೆಗೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಮಂಗಳವಾರ ೨೯ ಜನರನ್ನು ಬಂಧಿಸಿ ಕುಮಟಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಾರಾಯಿ ಮಾರಾಟದ ಆರೋಪಿ ನಾಗೇಶ ನಾಯ್ಕ ಎಂಬುವನನ್ನು ಮೆರವಣಿಗೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಾರಾಯಿ ವಿರೋಧಿ ಹೋರಾಟ ಸಮಿತಿಯ 8 ಮಹಿಳೆಯರು ಬಂಧಿತರ ಪಟ್ಟಿಯನ್ನು ಸೇರಿದ್ದು, ಬಂಧಿತ ೨೦ ಜನರನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿಗಳನ್ನು ಭವಾನಿ ಮಾದೇವ ಖಾರ್ವಿ, ತುಳಸಿ ಗೋವಿಂದ ಖಾರ್ವಿ, ಲಕ್ಷ್ಮಿ ನಾಗೇಶ ಖಾರ್ವಿ, ಲಕ್ಷ್ಮಿ ವಸಂತ ಖಾರ್ವಿ, ಗಿರಿಜಾ ಶೇಷ ಖಾರ್ವಿ, ಮನೋಜ ಮಾದೇವ ಖಾರ್ವಿ, ಹನುಮಂತ ಬಾಬಯ್ಯ ಖಾರ್ವಿ, ಸುನಿಲ್ ತಿಮ್ಮಪ್ಪ ಖಾರ್ವಿ, ಲೊಕೇಶ ದೇವಯ್ಯ ಖಾರ್ವಿ, ರಾಘವೇಂದ್ರ ವೆಂಕಟ್ರಮಣ ಖಾರ್ವಿ, ನಿತ್ಯಾನಂದ ಖಾರ್ವಿ, ಶ್ರೀಧರ ಮಂಜುನಾಥ ಖಾರ್ವಿ, ಭಾಸ್ಕರ ಶೇಷಗಿರಿ ಖಾರ್ವಿ, ಮುಕ್ತಾ ಗಣಪತಿ ಖಾರ್ವಿ, ವಸಂತ ರಾಮಾ ಖಾರ್ವಿ, ಸಂತೋಷಿ ಹನುಮಂತ ಖಾರ್ವಿ, ಸಂತೋಷ ಬಾಬು ಖಾರ್ವಿ, ಶ್ರೀನಿವಾಸ ನಾರಾಯಣ ಖಾರ್ವಿ, ಲಕ್ಷ್ಮಿ ನಾಗಪ್ಪ ಖಾರ್ವಿ, ಅನಿಲ ತಿಮ್ಮಪ್ಪ ಖಾರ್ವಿ ಎಂದು ಗುರುತಿಸಲಾಗಿದೆ.
ಭಟ್ಕಳ ಶಹರ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 9 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಅವರನ್ನು ಮಹೇಶ ದೇವಯ್ಯ ಖಾರ್ವಿ, ಮಹೇಶ ಮಂಜುನಾಥ ಖಾರ್ವಿ, ಸುರೇಂದ್ರ ಗೋವಿಂದ ಖಾರ್ವಿ, ಉಮೇಶ ಬಿಕ್ಕು ಖಾರ್ವಿ, ವಸಂತ ನಾರಾಯಣ ನಾಯ್ಕ, ಮೋಹನ ಜಟ್ಟಪ್ಪ ನಾಯ್ಕ, ಗಣಪತಿ ನಾರಾಯಣ ದೇವಡಿಗ, ನಾಗೇಶ ಜಟ್ಪಪ್ಪ ನಾಯ್ಕ, ನಾಗೇಶ ಮಂಜುನಾಥ ದೇವಡಿಗ ಎಂದು ಹೆಸರಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಭಟ್ಕಳದಾದ್ಯಂತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.