ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಖ್ಯಾತ ಕನ್ನಡ ಇಸ್ಲಾಮಿಕ್ ವಾರಪತ್ರಿಕೆ - ಈಗ ಅಂತರ್ಜಾಲದಲ್ಲಿ

ಮಂಗಳೂರು: ಖ್ಯಾತ ಕನ್ನಡ ಇಸ್ಲಾಮಿಕ್ ವಾರಪತ್ರಿಕೆ - ಈಗ ಅಂತರ್ಜಾಲದಲ್ಲಿ

Fri, 25 Dec 2009 03:39:00  Office Staff   S.O. News Service

ಮಂಗಳೂರು,ಡಿ.೨೩; ಸನ್ಮಾರ್ಗ ವಾರ ಪತ್ರಿಕೆಯ ನೂತನ ವೆಬ್ ಸೈಟ್ ಉದ್ಘಾಟನಾ ಸಮಾರಂಭವು ನಗರದ ಶ್ರೀನಿವಾಸ್ ಹೊಟೇಲ್ ನಲ್ಲಿ ಸಂಜೆ 4.15 ಕ್ಕೆ ನಡೆಯಿತು. ವೆಬ್ ಸೈಟ್ ನ್ನು ಸಾಹಿತಿ ಡಾ| ನಾ. ಮೊಗಸಾಲೆಯವರು ಉದ್ಘಾಟಿಸಿದರು. 23-san2.jpg ಮನುಷ್ಯನನ್ನು ಮೇಲೆತ್ತುವ ಪ್ರಕ್ರಿಯೆಯೇ ಧರ್ಮ. ದುರದೃಷ್ಟವಶಾತ್ ಜನರು ಧರ್ಮವನ್ನು ಆಯುಧವಾಗಿ ಬಳಸುತ್ತಿರುವುದು ವಿಷಾದನೀಯ. ಗಡ್ಡದವರೆಲ್ಲಾ ಉಗ್ರಗಾಮಿಗಳಲ್ಲ ಅವರಲ್ಲೂ ಸಜ್ಜನರಿದ್ದಾರೆ. ಆದರೆ ನಾವು ನೋಡುವ ದೃಷ್ಟಿ ಸರಿಯಾಗಿರಬೇಕು ಎಂದು ಉದ್ಘಾಟನಾ ಭಾಷಣ ಮಾಡಿದ ಡಾ| ನಾ. ಮೊಗಸಾಲೆ ಹೇಳಿದರು. 23-san4.jpg ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜ|ಮಹಮ್ಮದ್ ಅಬ್ದುಲ್ಲಾ ಜಾವೀದ್ ರಾಜ್ಯಾಧ್ಯಕ್ಷರು,ಜಮಾತೆ ಇಸ್ಲಾಮೀ ಹಿಂದ್ ಕರ್ನಾಟಕಾ-ಗೋವಾ ಇವರು ವಹಿಸಿದ್ದರು. ಸನ್ಮಾರ್ಗ ಪತ್ರಿಕೆಯ ಸಂಪಾದಕರಾದ ಜ|ಏ.ಕೆ.ಕುಕ್ಕಿಲ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಾಡಿದರು. ಉಪಸಂಪಾದಕ ಇಬಾಹೀಂ ಸಈದ್, ಪಕ್ಕಲಡ್ಕ ದೇವರ ನಾಮ ಸ್ಮರಣೆಯ ಕಿರಾಅತ್ ಪಠಿಸಿದರು. 23-san5.jpg

23-san6.jpg

23-san7.jpg

23-san9.jpg 

ಸನ್ಮಾರ್ಗ ಹಾಗೂ ವೆಬ್ ಸೈಟ್ ಬಗ್ಗೆ ಜ| ಎಚ್. ಮಹಮ್ಮದ್ ಇಸ್ಮಾಯಿಲ್ ಎಂ.ಡಿ ಪ್ರೋ. ಕೆ.ಎಂ.ಸಿ ಮಂಗಳೂರು ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಸನ್ಮಾರ್ಗದ ಪ್ರದಾನ ಸಂಪಾದಕ ನೂರ್ ಮಹಮ್ಮದ್, ಸಂಪಾದಕ ಅಬ್ದುಲ್ ಖಾದರ್ ಪುತ್ತಿಲ, ಸನ್ಮಾರ್ಗ ಟ್ರಸ್ಟ್ ಕಮಿಟಿ ಚೇರ್ ಮೆನ್ ಕೆ.ಎಂ.ಷರೀಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

www.sanmarga.com ನಲ್ಲಿ ಸನ್ಮಾರ್ಗ ಪತ್ರಿಕೆಯ ಎಲ್ಲಾ ಸಂಚಿಕೆಗಳು ಲಭ್ಯವಿರುತ್ತದೆ ಎಂದು ಸನ್ಮಾರ್ಗ ಪತ್ರಿಕೆಯ ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮ ವನ್ನು ಸನ್ಮಾರ್ಗ ಪತ್ರಿಕೆಯ ಉಪಸಂಪಾದಕ ಮಹಮ್ಮದ್ ಅಶ್ರಫ್ ನಿರೂಪಿಸಿದರು. 23-san1.jpg ಮುಹಮ್ಮದ್ ನಿಸಾರ್ ಧನ್ಯವಾದವಿತ್ತರು. (ವಿಶೇಷ ವರದಿ/ಚಿತ್ರ : ಸತೀಶ್ ಕಾಪಿಕಾಡ್)

 

ಸೌಜನ್ಯ: ಗಲ್ಫ್ ಕನ್ನಡಿಗ


Share: