ಬೆಂಗಳೂರು,ಫೆಬ್ರವರಿ 23ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೆಎಸ್‌ಆರ್‌ಪಿ ೯ನೇ ಬೆಟಾಲಿಯನ್ ಆರ್‌ಪಿಐ ರಾಮಚಂದ್ರ ಅವರ ಪುತ್ರಿ, ಆನೇಕಲ್ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸುಷ್ಮಾ (೨೫) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾಳೆ.
ಮೂಲತ: ಶಿವಮೊಗ್ಗ ಜಿಲ್ಲೆ ಹೊನ್ನವಳ್ಳಿ ತಾಲ್ಲೂಕಿನವರಾದ ರಾಮಚಂದ್ರಪ್ಪ ಅವರು ಕಳೆದ ಹಲವು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಅಂದಿನಿಂದ ಬೆಂಗಳೂರಿನ್ಲೇ ವಾಸವಾಗಿದ್ದರು. ಎನ್ನಲಾಗಿದೆ.
ಕೆ.ಎಸ್.ಆರ್.ಪಿ. ೯ನೇ ಬೆಟಾಲಿಯನ್‌ನಲ್ಲಿ ಆರ್.ಪಿ.ಐ. ಆಗಿರುವ ರಾಮಚಂದ್ರ ಅವರ ಪುತ್ರಿ ಸುಷ್ಮಾ ಅವರು, ಪದವಿ ಮುಗಿದ ಬಳಿಕ ಕಳೆದ ೨೦೦೭ರಲ್ಲಿ ಕರ್ನಾಟಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹುದ್ದೆಗೆ ಆಯ್ಕೆಯಾಗಿದ್ದರು.
೨೦೦೮-೦೯ರಲ್ಲಿ ಮೈಸೂರಿನಲ್ಲಿ ತರಬೇತಿ ಪೂರೈಸಿದ ನಂತರ ಆನೇಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಕಳೆದ ೨-೩ ತಿಂಗಳಿನಿಂದ ಸರ್ಜಾಪುರ ಪೊಲೀಸ್ ಠಾಣೆ ಉಸ್ತುವಾರಿಯನ್ನು ಸಹಾ ಸುಷ್ಮಾ ಅವರೇ ನೋಡಿಕೊಳ್ಳುತ್ತಿದ್ದರು.
ಕಳೆದ ೨-೩ ದಿನಗಳಿಂದ ರಜೆಯ ಮೇಲೆ ತೆರಳಿದ ಸುಷ್ಮಾ ಅವರುನಿನ್ನೆ ತಾನೇ ಕೆಲಸಕ್ಕೆ ಹಾಜರಾಗಿದ್ದರು. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಆನೇಕಲ್ ಪಟ್ಟಣದಲ್ಲಿರುವ ತಮ್ಮ ಪೊಲೀಸ್ ಕ್ವಾರ್ಟಸ್‌ಗೆ ತೆರಳಿದ್ದರು.
ಮನೆಗೆ ಹೋದ ಎಸ್‌ಐ ಮತ್ತೆ ಠಾಣೆಗೆ ವಾಪಸು ಬಾರದಿರುವುದರ ಬಗ್ಗೆ ಅನುಮಾನಗೊಂಡ ಠಾಣೆಯ ಸಿಬ್ಬಂದಿ ಸುಷ್ಮಾ ಅವರ ಮನಗೆ ಹೋಗಿ ನೋಡಿದಾಗ ಅವರು ತಮ್ಮ ಸರ್ವೀಸ್ ರಿವಾಲ್ವರ್‌ನಿಂದ ಆತ್ಮಹತ್ಯೆಮಾಡಿಕೊಂಡಿರುವುದು ಗೋಚರವಾಗಿದೆ.
ಬೆಂಗಳೂರು ಗ್ರಾಮಾಂತರ ಎಸ್‌ಪಿ ಡಾ. ಬಿ.ಎ. ಮಹೇಶ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮಹಿಳಾ ಇನ್ಸ್‌ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಉನ್ನತಾಧಿಕಾರಗಳ ಜತೆಗೂಡಿ ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.