ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಬಿ.ಬಿ.ಎ ಪರೀಕ್ಷೆಯಲ್ಲಿ ಶೇ 91.89 ಅಂಕ ಪಡೆದ ಕುಮಾರಿ ವೃಂದಾ ಆರ್ ಜೋಗಿ

ಭಟ್ಕಳ: ಬಿ.ಬಿ.ಎ ಪರೀಕ್ಷೆಯಲ್ಲಿ ಶೇ 91.89 ಅಂಕ ಪಡೆದ ಕುಮಾರಿ ವೃಂದಾ ಆರ್ ಜೋಗಿ

Mon, 05 Aug 2024 01:46:42  Office Staff   so news

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ 2023 ರಲ್ಲಿ ನಡೆದ ಬಿ.ಬಿ.ಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವೃಂದಾ ಆರ್ ಜೋಗಿ ಶೇ 91.89 ಅಂಕ  ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ಬಿಬಿಎ ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ.

ಭಟ್ಕಳದ ಶ್ರೀಮತಿ ವೀಣಾ ಹಾಗೂ ಶ್ರೀ ರಾಮನಾಥ ಜೋಗಿಯವರ ಸುಪುತ್ರಿಯಾಗಿದ್ದು, ಈ ವಿದ್ಯಾರ್ಥಿನಿಯ ಅಪ್ರತಿಮ ಸಾಧನೆಯಿಂದ ಉತ್ತರ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಾಗಿದೆ. ಈ ಯುವಪ್ರತಿಭೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿರುತ್ತಾರೆ.


Share: