ಭಟ್ಕಳ:ಕೇಂದ್ರ ಸರ್ಕಾರದ ಜಲ್ ಜೀವನ್ ಮೀಷನ್ ಯೋಜನೆಯೂ ಮಧ್ಯಪ್ರದೇಶದಲ್ಲಿ ಸಮರ್ಪಕವಾಗಿ ಜಾರಿಯಾದ ಮಾದರಿಯೂ ಅಂತರಾಷ್ಟಿಯ ಮಟ್ಟದಲ್ಲಿ ಗುರುತಿಸಿದ್ದು, ಅಂತರಾಷ್ಟಿಯ ರ‍್ಯಾಂಕಿಗ್ ಪಟ್ಟಯಲ್ಲಿ ಮಾನ್ಯತೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಭಾರತದ ಒಂದು ಯೋಜನೆಯೂ ಅಂತರಾಷ್ಟಿಯ ಮಟ್ಟದಲ್ಲಿ ಮಾದರಿಯಾಗಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾದರೇ ಇದರ ರೂವಾರಿ ಉತ್ತರ ಕನ್ನಡ ಜಿಲ್ಲೆಯ ಮೂಲದ ಐ.ಎ.ಎಸ್ ಅಧಿಕಾರಿ ತೇಜಸ್ವಿ ನಾಯ್ಕ ಆಗಿದ್ದಾರೆ.
ಪ್ರತಿ ಮನೆಗೂ ಶುದ್ದ ಕುಡಿಯುವ ನೀರು ಸಿಗಬೇಕು ಎನ್ನುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಮಧ್ಯಪ್ರದೇಶ ರಾಜ್ಯದ ಐ.ಎ.ಎಸ್ ಶ್ರೇಣಿಯ ಅಧಿಕಾರಿಯಾಗಿದ್ದ ತೇಜಸ್ವಿ ನಾಯ್ಕ ಜಲ್ ಜೀವನ ಮೀಷನ್ ಇದರ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುವ ವೇಳೆಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅದರ ಸದುಪಯೋಗ ಸಿಗುವಂತೆ ಪರಿಣಾಮಕಾರಿಯಾಗಿ ಅದರ ಅನುಷ್ಠಾನ ಮಾಡಿದ್ದರು. ಪರಿಸರ ಸಂರಕ್ಷಣೆ ಹಾಗು ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳ ಬಗ್ಗೆ ಅಂತರಾಷ್ಟಿಯ ಮಟ್ಟದಲ್ಲಿ ಅಧ್ಯಯನ ನಡೆಸುವ ಏಷಿಯಾ ಪೆಸಿಪಿಕ್ ಅವಾರ್ಡ ಎನ್ನುವ ಸಂಸ್ಥೆಯೂ ಮಧ್ಯಪ್ರದೇಶದ ಜಲ ಜೀವನ ಮೀಷನ್ ಯೋಜನೆಯ ಬಗ್ಗೆ ಅಧ್ಯಯನ ನಡೆಸಿ ಪ್ರಶಂಸಿಸಿ ಅದನ್ನು ಅಂತರಾಷ್ಟಿಯ ರ‍್ಯಾಂಕಿಗ್ ಗೆ ಅರ್ಹತೆಗೊಳಿಸಿದೆ. ಉತ್ತರ ಕನ್ನಡ ಸಿದ್ದಾಪುರ ತಾಲ್ಲೂಕಿನವರಾದ ಐ.ಎ.ಎಸ್ ಅಧಿಕಾರಿ ತೇಜಸ್ವಿ ನಾಯ್ಕ ಅವರ ಸಾಧನೆ ದೇಶಕ್ಕೆ ಮಾದರಿಯಾಗಿದ್ದು, ಪ್ರಸ್ತುತ ಅವರ ಕೇಂದ್ರ ಬೃಹತ್ ಹಾಗು ಮದ್ಯಮ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರ ಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.