ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಸಲೀಲೆಯ ಖ್ಯಾತಿಯ ಕಾಮಿ ಸ್ವಾಮಿ ನಿತ್ಯಾ ನಂದರಿಗೆ ಮೇ ತಿಂಗಳ ೧೨ ರವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು: ರಾಸಲೀಲೆಯ ಖ್ಯಾತಿಯ ಕಾಮಿ ಸ್ವಾಮಿ ನಿತ್ಯಾ ನಂದರಿಗೆ ಮೇ ತಿಂಗಳ ೧೨ ರವರೆಗೆ ನ್ಯಾಯಾಂಗ ಬಂಧನ

Sat, 01 May 2010 03:12:00  Office Staff   S.O. News Service

ಬೆಂಗಳೂರು, ಏ. ೩೦: ರಾಸಲೀಲೆಯ ಖ್ಯಾತಿಯ ಕಾಮಿ ಸ್ವಾಮಿ ನಿತ್ಯಾ ನಂದನನ್ನ ಮೇ ತಿಂಗಳ ೧೨ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಕಾಮಿ ಸ್ವಾಮಿ ನಿತ್ಯಾನಂದನ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಕೊನೆಯಾದ್ದರಿಂದ ಇಂದು ಈತನನ್ನ ರಾಮನಗರದ ಜಿಲ್ಲಾ ಸತ್ರನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಈತನನ್ನ ಮೇ ತಿಂಗಳ ೧೨ ರವರೆಗೆ ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿದ್ದಾರೆ.

ನಾನು ಗಂಡಸಲ್ಲ ದೇವ ಮಾನವ

ಕಳೆದ ೮ ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ನಿತ್ಯಾನಂದನ ವಿಚಾರಣೆಯನ್ನ ಸಿ.ಐ.ಡಿ. ಪೊಲೀಸರು ಬಹುತೇಖ ಕೊನೆಗೊಳಿಸಿದ್ದು ಈತ ನಾನು ದೇವ ಮಾನವ ಪುರಷನಲ್ಲ ಬೇಕಿದ್ದರೆ ಪುರಷತ್ವ ಪರೀಕ್ಷಿಸಿ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ನಾನು ಪುರುಷನಲ್ಲ. ಯಾರೋಂದಿಗೂ ಲೈಂಗಿಕ ಚಟುವಟಿಕೆ ನಡೆಸಲು ನನ್ನಿಂದ ಸಾಧ್ಯವಿಲ್ಲ ಬೇಕಾದರೆ ಪುರುಷತ್ವ ಪರೀಕ್ಷೆ ನಡೆಸಿ ಎಂದು ಹೇಳುವ ಮೂಲಕ ಪೊಲೀಸರಿಗೆ ಸವಾಲಾಗಿದ್ದಾನೆ.

ನಿತ್ಯಾನಂದನ ಹೇಳಿಕೆಯನ್ನ ಪೊಲೀಸರು ಒಪ್ಪದೆ ಆತನ ಆಶ್ರಮದಿಂದ ವಶಪಡಿಸಿಕೊಂಡಿರುವ ರಾಸಲೀಲೆಯ ಸಿಡಿಗಳ ತುಣುಕನ್ನ ಸತ್ಯಾಸತ್ಯತೆ ಪರೀಕ್ಷೆಗಾಗಿ ಹೈದ್ರಾಬಾದ್‌ನ ಪೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿದ್ದು, ಅಲ್ಲಿಂದ ಬರುವ ವರದಿಗಾಗಿ ಕಾಯುತ್ತಿದ್ದಾರೆ.

ನಿತ್ಯಾನಂದ ಸ್ವಾಮಿಯ ಪಾಸ್ ಪೊಟ್‌ನಲ್ಲೂ ಪುರುಷ ಎಂದೇ ನಮೂದಿಸಲಾಗಿದೆ. ಹಾಗಾಗಿ ಮೊಕದ್ದಮೆಯಿಂದ ಬಚಾವಾಗಲು ಜನರಿಂದ ಅನುಕಂಪ ಗಿಟ್ಟಿಸಲು ನಿತ್ಯಾನಂದ ನಾನು ಪುರುಷನೇ ಅಲ್ಲ ಎನ್ನುವ ಸುಳ್ಳನ್ನು ಹೇಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದೇಶ ಪ್ರವಾಸ ಮಾಡಿರುವ ನಿತ್ಯಾನಂದ ವಿದೇಶಗಳಿಂದ ತಂದಿರುವ ವಸ್ತುಗಳ ಪಟ್ಟಿಯನ್ನು ನೀಡುವಂತೆ ಕಂದಾಯ ಜಾರಿ ನಿರ್ದೇಶನಾಲಯದ ಮೂಲಕ ರಾಜ್ಯ ಪೊಲೀಸರು ಎಲ್ಲ ವಿಮಾನ ನಿಲ್ದಾಣಗಳಿಗೂ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.

ಭಾರತಿದಿಂದ ತೆರಳುವಾಗ ನಿತ್ಯಾನಂದ ಚಿನ್ನದ ಲೇಪನವಿರುವ ಕಮಂಡಲ ಮತ್ತಿತರ ಧಾರ್ಮಿಕ ವಸ್ತುಗಳನ್ನು ಕೊಂಡೂಯ್ದು ಅಲ್ಲಿಂದ ಬರುವಾಗ ಸಂಪೂರ್ಣ ಚಿನ್ನದ ವಸ್ತುಗಳನ್ನು ತರುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ನಿತ್ಯಾನಂದ ದೇಶ ವಿದೇಶಗಳಲ್ಲಿರುವ ತನ್ನ ಬ್ಯಾಂಕ್ ಖಾತೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದು ಸುಮಾರು ೫೦ ಕೋಟಿ ರೂ. ಗಳನ್ನು ಈ ಬ್ಯಾಂಕ್‌ಗಳಲ್ಲಿ ಹೊಂದಿದ್ದಾನೆ ಎಂದು ಗೊತ್ತಾಗಿದೆ.

ಕಳೆದ ೮ ದಿನಗಳಿಂದ ನಿತ್ಯಾನಂದನಿಂದ ಸಾಕಷ್ಟು ಮಾಹಿತಿ ಪಡೆದಿರುವ ಪೊಲೀಸರು ಈಗ ಅವುಗಳ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಿದ್ದಾರೆ.


Share: