ಮಂಗಳೂರು, ಅ.5: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ನೆರೆ ಹಾವಳಿಯಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಧಾವಿಸಿದ್ದು, ಈ ನಿಟ್ಟಿನಲ್ಲಿ ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿದ್ಯಾಶಂಕರ್ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಪೊನ್ನುರಾಜ್ ಮತ್ತು ಜಿಲ್ಲಾ ಎಸ್ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ರ ಉಪಸ್ಥಿತಿಯಲ್ಲಿ ವಿವಿಧ ಸಂಘಟನೆಗಳ ವಿಶೇಷ ಸಭೆ ನಡೆಸಲಾಯಿತು.
ಕೆನರಾ ಚೇಂಬರ್ ಆಫ್ ಕಾಮರ್ಸ್, ಕಲ್ಕೂರಾ ಪ್ರತಿಷ್ಠಾನ, ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಎಲ್ಲ ಸಂಘ-ಸಂಸ್ಥೆಗಳ ಸಲಹೆಗಳನ್ನು ಆಲಿಸಿದ ಉಸ್ತುವಾರಿ ಕಾರ್ಯದರ್ಶಿ ವಿದ್ಯಾಶಂಕರ್ ಮತ್ತು ಜಿಲ್ಲಾಧಿಕಾರಿ ಪೊನ್ನುರಾಜ್ ಸಾರ್ವಜನಿಕರು ಸಾಕಷ್ಟು ನೆರವು ನೀಡಬೇಕು ಎಂದು ಮನವಿ ಮಾಡಿದರು.
1 ಕೋಟಿ ರೂ.ಗುರಿ
ದಕ್ಷಿಣ ಕನ್ನಡ ಜಿಲ್ಲಾಡಳಿತ ಸುಮಾರು ೧ ಕೋಟಿ ರೂಪಾಯಿ ಸಂಗ್ರಹಿಸಿ ಸಂತ್ರಸ್ತರಿಗೆ ಕಳುಹಿಸಿ ಕೊಡುವ ಗುರಿ ಹಮ್ಮಿಕೊಂಡಿದೆ. ಇದಕ್ಕೆ ಜಿಲ್ಲೆಯ ಎಲ್ಲ ಜನರು ಮುಂದೆ ಬರ ಬೇಕು. ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಚೆಕ್-ಡಿ.ಡಿ. ಕಳುಹಿಸ ಬಹುದು. ನಗದು ಹಣವನ್ನೂ ನೀಡ ಬಹುದು. ಇದಕ್ಕೆ ಅ.೧೫ ಕೊನೆಯ ದಿನವಾಗಿದೆ. ಅಲ್ಲದೆ, ಬಟ್ಟೆಬರೆ ಮತ್ತಿತರ ಸಾಮಗ್ರಿಗಳನ್ನೂ ಅ.೭ರೊಳಗೆ ಕಳುಹಿಸಿಕೊಡಬಹುದು. ಹಣ, ಸಾಮಗ್ರಿಗಳನ್ನು ಸ್ವೀಕರಿಸಿದ್ದಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿ ಯಿಂದ ಹಿಂಬರಹ ಪತ್ರವನ್ನೂ ನೀಡ ಲಾಗುತ್ತದೆ. ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ನೋಡಿ ಕೊಳ್ಳಲಾಗುತ್ತದೆ. ಅಲ್ಲದೆ, ಇಲ್ಲಿಂದ ಸಾಮಗ್ರಿ ಕೊಂಡೊಯ್ಯುವಾಗ ವಿಶೇಷ ಸ್ವಯಂ ಸೇವಕರನ್ನು ಕೂಡ ಕಳುಹಿಸಿ ಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ಹೇಳಿದರು.
ಕೌಂಟರ್ ಸ್ಥಾಪನೆ
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ರೆಡ್ ಕ್ರಾಸ್ ಕಚೇರಿ, ಮಂಗಳೂರು ಮಹಾ ನಗರ ಪಾಲಿಕೆ ಮತ್ತು ಎಲ್ಲ್ಲ ತಾಲೂಕು ಕಚೇರಿಗಳ ಕೇಂದ್ರದಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಲಾಗುತ್ತದೆ. ದಾನಿಗಳು ಇಲ್ಲಿ ತಮ್ಮ ಹಣ, ಬಟ್ಟೆಬರೆಗಳನ್ನು ನೀಡಿ ಸೂಕ್ತ ರಶೀದಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಪಾದಯಾತ್ರೆ
ಜಿಲ್ಲಾ ಉಸ್ತುವಾರಿ ಸಚಿವ, ಮೇಯರ್, ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ, ಶಾಸಕರು, ಸಂಸದರು... ಹೀಗೆ ಒಬ್ಬೊಬ್ಬರ ಉಸ್ತುವಾರಿ ಮೂಲಕ ಅ.೭ರಂದು ಜಿಲ್ಲೆಯಾದ್ಯಂತ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಭರವಸೆ
ಎಂಆರ್ಪಿಎಲ್ ಡಿಜಿಎಂ ಲಕ್ಷ್ಮಿ ಕುಮಾರನ್ ಈಗಾಗಲೇ ತಾವು ಬಟ್ಟೆಬರೆಗಳನ್ನು ಸಂಗ್ರಹಿಸಿದ್ದು, ಸಂಸ್ಥೆಯ ಉದ್ಯೋಗಿಗಳು ೧ ದಿನದ ವೇತನ ನೀಡಲು ಮುಂದೆ ಬಂದಿದ್ದಾರೆ ಎಂದರು.
ಜಿಲ್ಲಾಧಿಕಾರಿಯ ವಿಶೇಷ ಮನವಿಯ ಮೇರೆಗೆ ಡಿಜಿಎಂ ಮತ್ತಷ್ಟು ಧನ ಸಹಾಯ ನೀಡುವ ಭರವಸೆ ನೀಡಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀನಿವಾಸ್ ಕಾಮತ್ ಕೂಡ ಹೆಚ್ಚಿನ ಧನ ಸಹಾಯ ನೀಡುವ ಆಶ್ವಾಸನೆ ನೀಡಿದರು.
ದುರುಪಯೋಗ ತಡೆಯಬೇಕು
ನೆರೆ ಹಾವಳಿ ಪೀಡಿತ ಪ್ರದೇಶದ ಜನರು ಹಳೆ ಬಟ್ಟೆಬರೆಗಳನ್ನಾದರೂ ಕಳುಹಿಸಿಕೊಡಿ ಎಂದು ವಿನಂತಿಸಿದ್ದಾರೆ. ಇದಕ್ಕೆ ಶೀಘ್ರದಲ್ಲೇ ಸ್ಪಂದಿಸಬೇಕಾಗಿದೆ ಎಂದ ಕಲ್ಕೂರಾ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರಾ, ಇಂಥ ಸಂದರ್ಭ ಧನ ಸಂಗ್ರಹಕ್ಕಾಗಿ ಕೆಲವು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಇವುಗಳ ಮೇಲೆ ಕಣ್ಣಿಡಬೇಕು. ಎಲ್ಲ ಹಣಗಳು ಜಿಲ್ಲಾಡಳಿತ ಮೂಲಕ ಕಳುಹಿಸಿಕೊಡುವ ವ್ಯವಸ್ಥೆಯಾಗಬೇಕು. ಯಾವುದೇ ಕಾರಣಕ್ಕೂ ಅದು ದುರ್ಬಳಕೆಯಾಗಬಾರದು ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಸಂಗ್ರಹಿಸಿದ ಹಣ, ಸಾಮಗ್ರಿಗಳು ಸಂಬಂಧಪಟ್ಟವರಿಗೆ ತಲುಪಿಲ್ಲ. ಇದರ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ರೆಡ್ ಕ್ರಾಸ್ ಸಂಸ್ಥೆಯ ಮುಖಂಡ ಎನ್.ಜಿ. ಮೋಹನ್ ಒತ್ತಾಯಿಸಿದರು