ಭಟ್ಕಳ, ಜನವರಿ 29: ಮನೆಯಲ್ಲಿ ಊಟ ಮುಗಿಸಿ ಬುಧವಾರ ಮಧ್ಯಾಹ್ನ ಶಾಲೆಯ ಹಾದಿ ಹಿಡಿದ ಇಬ್ಬರು ವಿದ್ಯಾರ್ಥಿಗಳು ಕಾಣೆಯಾಗಿರುವ ಘಟನೆ ನಡೆದಿದೆ.
ಕಾಣೆಯಾದವರನ್ನು ಮಗ್ದೂಮ್ ಕಾಲೋನಿಯ ಸಾಹೀನ್ ಸ್ಟ್ರೀಟ್‌ನ ನಿವಾಸಿ ನದೀಮ್ ಹಾಗೂ ಡಿ.ಪಿ. ಕಾಲೋನಿಯ ನಗೀನ್ ಕುಮಾರ್ ಶೆಟ್ಟಿ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಆನಂದಾಶ್ರಮ ಕಾನ್ವೆಂಟಿನ ಎಂಟನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.ವಿದ್ಯಾರ್ಥಿಗಳ ಗುರುತು ಪತ್ತೆ ಹಚ್ಚಿದವರು ಕೂಡಲೇ ಸಮೀಪದ ಪೊಲಿಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.