ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಂಜುಮನ್ ತಾಂತ್ರಿಕ ವಿದ್ಯಾಲಯಕ್ಕೆ ಎರೆಡು ರ್‍ಯಾಂಕ್

ಭಟ್ಕಳ: ಅಂಜುಮನ್ ತಾಂತ್ರಿಕ ವಿದ್ಯಾಲಯಕ್ಕೆ ಎರೆಡು ರ್‍ಯಾಂಕ್

Wed, 06 Jan 2010 02:19:00  Office Staff   S.O. News Service
ಭಟ್ಕಳ, ಜನವರಿ 5: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಂಜುಮನ್ ಹಾಮಿಯೆ ಮುಸ್ಲಿಮೀನ  ಸಂಸ್ಥೆಯ ಅಧೀನದಲ್ಲಿ ನಡೆಸಲ್ಪಡುವ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ರ್‍ಯಾಂಕ್ ಗಳಿಸಿದ್ದು ಅಂಜುಮನ್ ಸಂಸ್ಥೆಯ ಕೀರ್ತಿಯನ್ನು ಮೆಲಕ್ಕೆತ್ತರಿಸಿದ್ದಾರೆ.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗದ ಗಣೇಶ್ ಪುಜಾರಿ ಶೇ.೮೬.೨೨ ಅಂಕಗಳನ್ನು ಪಡೆಯುವುದರ ಮೂಲಕ ನಾಲ್ಕನೆ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಸಿವಿಲ್ ವಿಭಾಗದ ಮುಹಮ್ಮದ್ ಹುಸೇನ್ ಶೇ ೮೫.೨೬ ಅಂಕಗಳೊಂದಿಗೆ ಎಂಟನೆಯ ರ್‍ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದು ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಡಾ. ನೂರ್ ಆಹ್ಮದ್ ಮತ್ತು ಸಿಬಂಧಿ ಹಾಗೂ ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯ ಜುಕಾಕೋ ಅಬ್ದುಲ್ ರಹೀಮ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ. 


Share: