ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಸಚಿವ ಮಂಕಾಳ ಎಸ್ ವೈದ್ಯ ನೇತೃತ್ವದಲ್ಲಿ ಕೊಣಾರ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆ

ಭಟ್ಕಳ:ಸಚಿವ ಮಂಕಾಳ ಎಸ್ ವೈದ್ಯ ನೇತೃತ್ವದಲ್ಲಿ ಕೊಣಾರ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆ

Sun, 17 Nov 2024 06:54:05  Office Staff   S O News

ಭಟ್ಕಳ : ಗೊಂಡ ಸಮಾಜಕ್ಕೆ ಆರ್ ಡಿ ನಂಬರ್ ಹೊಂದಿರುವ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಿದ್ದೆ ಮಂಕಾಳ ವೈದ್ಯ, ಈ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಯೋಚಿಸದೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಚಿಂತಿಸುತ್ತಿದ್ದೆನೆ. ಗೊಂಡ ಸಮಾಜಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಸಿಕ್ಕೆ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.

ತಾಲೂಕಿನ ಕೊಣಾರ ಗ್ರಾಮದಲ್ಲಿ ನಡೆದ ಜನಸ್ಪಂದನಾ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಮಾತು ಕೊಟ್ಟಂತೆ ನಿಮ್ಮೆಲ್ಲರ ಸಮಸ್ಯೆಗಳನ್ನು ಆಲಿಸಲು ನಿಮ್ಮ ಬಳಿ ಬಂದಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ ಗಳಿಗೂ ಬೇಟಿ ನೀಡುತ್ತಿದ್ದೇನೆ. ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಾವು ಕೊಟ್ಟ ಭರವಸೆಯಂತೆ  ಐದು ಗ್ಯಾರಂಟಿಗಳನ್ನು ಈಡೇರಿಸಿದ್ದು ಇದರಿಂದಾಗಿ ಬಡವರಿಗೆ ಅನುಕೂಲವಾಗಿದೆ. ಜತೆಜತೆಗೆ ನಾವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೂಡ ನೆರವೇರಿಸುತ್ತಿದ್ದೇವೆ. ವಿರೋಧಿಗಳು ಗ್ಯಾರಂಟಿ ಯೋಜನೆಗಳು ಸಾಕಾರಗೊಳಿಸುವುದು ಸಾಧ್ಯವೆ ಇಲ್ಲವೆಂದು ಹೇಳಿದ್ದರು ಇದೀಗ ಗ್ಯಾರಂಟಿ ಯೋಜನೆಗಳು ಎಲ್ಲರ ಮನೆಯು ತಲುಪಿದೆ.  ಕ್ಷೇತ್ರದಲ್ಲಿ ಮನೆ ಹಾಗೂ ಜಾಗ ಹೊಂದಿರದಿದ್ದವರಿಗೆ 317 ಮನೆಗಳು ಮಂಜೂರು ಮಾಡಿಸಿದ್ದು ನಿರ್ಗತಿಕರಿಗೆ ನೇರವಾಗಿ ಮನೆ ಕೊಡವ ಯೋಜನೆ ಇದಾಗಿದೆ ಎಂದರು.
ಸಭೆಯಲ್ಲಿ ಕೊಣಾರ ಸರಕಾರಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕೌಶಿಕಾ ಶಿಥಿಲಗೊಂಡ ಶಾಲೆಯ ಕೊಠಡಿಗಳ ಕುರಿತು ಸಚಿವರ ಗಮನ ಸೆಳೆದಿದ್ದು, ಸಚಿವರು ಶಿಘ್ರದಲ್ಲಿ ಕೊಠಡಿ ನಿರ್ಮಾಣ ಕಾಮಗಾರಿ ಪಾರಂಭಿಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ
ಸಾರ್ವಜನಿಕ ಸಮಸ್ಯೆಗಳಾದ ರಸ್ತೆ, ಚರಂಡಿ, ಬಸ್ ಸಂಚಾರ, ಶಾಲಾ ಕಟ್ಟಡ, ರಂಗಮಂದಿರ ನಿರ್ಮಾಣ, ಸೇತುವೆ ನಿರ್ಮಾಣ, ದೇವಾಲಯಗಳ ಜೀರ್ಣೋದ್ಧಾರ ಮುಂತಾದ ಅಭಿವೃದ್ಧಿ ಕಾಮಗಾರಿಯ ಕುರಿತು ಜನರು ಸಚಿವರ ಗಮನಕ್ಕೆ ತಂದಿದ್ದು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಭರವಸೆ ನೀಡಿದರು.

ಕಾರ್ಯಕ್ರದಲ್ಲಿ ಕೋಣಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಾರು ಜನರು ಪಾಲ್ಗೊಂಡು ಆರೋಗ್ಯ, ಶಿಕ್ಷಣ, ಮನೆ ನಿರ್ಮಾಣ, ವಿದ್ಯಾಭ್ಯಾಸ ಕ್ಕೆ ಸಂಬಂಧಪಟ್ಟ ತಮ್ಮ ಸಮಸ್ಯೆಗಳನ್ನು ಉಲ್ಲೇಖಿಸಿ ಸಚಿವರಿಗೆ ಅರ್ಜಿಯನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಮಾಜಿ ಸದಸ್ಯೆ ಜಯಲಕ್ಷ್ಮೀ ಗೊಂಡ, ಸಂಕಯ್ಯ ಗೊಂಡ, ಕೋಣಾರ ಪಂಚಾಯತ್ ಅಧ್ಯಕ್ಷ ನಾಗಪ್ಪ ಗೊಂಡ, ರಾಮಕೃಷ್ಣ ಶೆಟ್ಟಿ, ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಜನ್ನಾ ದೇವಾಡಿಗ, ಗ್ಯಾರಂಟಿ ಸಮಿತಿ ತಾಲೂಕಾ ಅಧ್ಯಕ್ಷ ರಾಜು ನಾಯ್ಕ ಮತ್ತಿತರರು ಇದ್ದರು.


Share: