ಬೆಂಗಳೂರು, ಮಾ. ೬: ಬೆಂಗಳೂರುನಗರ ಹೊರ ವಲಯದ ಬಿಡದಿ ಸಮೀಪದ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಚಿತ್ರನಟಿಯರೊಂದಿಗಿನ ರಾಸಲೀಲೆ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ.
ಸ್ವಾಮಿಯ ಲೈಂಗಿಕ ಕಾಮ ಕಾಂಡವನ್ನು ವಿಡಿಯೋ ಚಿತ್ರಿಕರಣ ಮಾಡಿದ್ದು, ಸ್ವಾಮಿಯ ಶಿಷ್ಯ ಹಾಗೂ ಕಾರು ಚಾಲಕ ಎಂಬುದು ಬಹಿರಂಗಗೊಂಡಿದೆ. ಅಲ್ಲದೆ, ಸ್ವಾಮಿ ಚಿತ್ರ ನಟಿಯರೊಂದಿಗೆ ಬೆಂಗಳೂರು ಸಮೀಪದ ಬಿಡದಿಯಲ್ಲಿನ ನಿತ್ಯಾನಂದ ಧ್ಯಾನಪೀಠದಲ್ಲೆ ಕಾಮಕಾಂಡದ ರಾಸಲೀಲೆ ನಡೆಸಿದ್ದ. ಸ್ವಾಮಿಯ ರಾಸಲೀಲೆಯ ಮತ್ತಷ್ಟು ಸಿಡಿಗಳು ತನ್ನ ಬಳಿ ಇವೆ ಎಂಬ ಕುತೂಹಲಕಾರಿ ಅಂಶವನ್ನು ಸ್ವಾಮಿಯ ಶಿಷ್ಯ ನಿತ್ಯಧರ್ಮ ನಂದ ಯಾನೆ ಕೆ.ಲೇನಿನ್ ಬಯಲು ಮಾಡಿದ್ದಾರೆ.
ಕಾಮುಕ ನಿತ್ಯಾನಂದ ಸ್ವಾಮಿ ಸಲಿಂಗ ಕಾಮಿ ಮಾತ್ರವಲ್ಲ, ಹಂತಕ ಎಂಬ ಆತಂಕಕಾರಿ ಅಂಶವನ್ನು ಸ್ವಾಮಿಯ ಕಾರು ಚಾಲಕ ಕೆ.ಲೇನಿನ್ ಚನ್ನೆ ಪೊಲೀಸ್ ಆಯುಕ್ತ ರಾಜೇಂದ್ರನ್ ಅವರಿಗೆ ದೂರು ನೀಡಿದ್ದು, ಮೇಲಿನ ಅಂಶಗಳನ್ನು ಚನ್ನೆ ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸನ್ಯಾಸದ ಹೆಸರಿನಲ್ಲಿ ಸ್ವಾಮಿ ನಿತ್ಯಾನಂದ ಸಾವಿರಾರು ಮುಗ್ದ ಭಕ್ತರನ್ನು ವಂಚಿಸುತ್ತಿದ್ದ. ಏನು ಅರಿಯದ ಭಕ್ತ ವೃಂದ ನೀಚ ವೃತ್ತಾಂತದ ಸ್ವಾಮಿಯ ಕಾಲಿಗೆರಗುವುದನ್ನು ಸಹಿಸಲಾಗದೆ ಆತನ ಲೈಂಗಿಕ ಕಾಮ ಕಾಂಡವನ್ನು ಬಯಲಿಗೆಳೆಯಲು ನಿರ್ಧಾರ ಮಾಡಿದೆ. ಸಾವಿರಾರು ಮಂದಿ ವಿದೇಶಿ ಭಕ್ತರಿಂದ ಕೋಟ್ಯಾಂತರ ರೂ. ಹಣ ಸಂಪಾದಿಸಿದ್ದಾರೆ ಎಂದು ಲೇನಿನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ನಿತ್ಯಾನಂದ ಸ್ವಾಮಿ ಧ್ಯಾನಪೀಠದಲ್ಲೆ ಕೆನಡಾ ಮೂಲದ ಪ್ರಜೆಯೊಬ್ಬನ ಕೊಲೆಯನ್ನು ಕೂಡ ನಡೆಸಿದ್ದರು. ಅಲ್ಲದೆ, ಪೀಠದೊಳಗೆ ಒಟ್ಟು ಮೂರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿತ್ಯಾನಂದ ಸ್ವಾಮಿ ತನ್ನ ತೆವಲಿಗೆ ಮಹಿಳೆಯರು ದೊರೆಯದ ಸಂದರ್ಭದಲ್ಲಿ ಧ್ಯಾನಪೀಠದಲ್ಲಿದ್ದ ಶಿಷ್ಯರನ್ನು ಸಲಿಂಗ ಕಾಮಕ್ಕೆ ಬಳಸುತ್ತಿದ್ದ. ಸ್ವಾಮಿ ನಿತ್ಯಾನಂದ ಸುಫಾರಿ ಹಂತಕ ಕೂಡ ಹೌದು ಎಂದು ಕಾರು ಚಾಲಕ ಲೇನಿನ್ ದೂರಿನಲ್ಲಿ ಹೇಳಿದ್ದಾನೆ ಎಂದು ಚೆನ್ನೆ ಪೊಲೀಸ್ ಆಯುಕ್ತರು ಬಹಿರಂಗಪಡಿಸಿದ್ದಾರೆ.
ಕಾಮಕಾಂಡ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿಯಿಂದ ತನಗೆ ಪ್ರಾಣ ಬೆದರಿಕೆ ಹಾಕಿದ್ದು, ತನಗೆ ಪೊಲೀಸ್ ರಕ್ಷಣೆ ಒದಗಿಸಲು ಕೆ.ಲೇನಿನ್ ಚೆನ್ನೆ ಪೊಲೀಸರಿಗೆ ಕೋರಿದ್ದಾರೆ. ಪೊಲೀಸರು ಅವರಿಗೆ ಅಗತ್ಯ ಭದ್ರತೆ ಕಲ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಹೊರ ವಲಯದ ಬಿಡದಿಯ ಧ್ಯಾನಪೀಠದಲ್ಲೆ ಕಾಮಕಾಂಡದ ರಾಸಲೀಲೆ ನಡೆದಿರುವ ಹಿನ್ನೆಲೆಯಲ್ಲಿ ಚೆನ್ನೆ ಪೊಲೀಸರು, ನಿತ್ಯಾನಂದ ಸ್ವಾಮೀಜಿಯ ಲೈಂಗಿಕ ಹಗರಣದ ತನಿಖೆಗೆ ಬೆಂಗಳೂರಿನ ಪೊಲೀಸರಿಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಕಾಮಪುರಾಣ ಬಯಲು ಮಾಡಿದ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ಕಾರು ಚಾಲಕನನ್ನು ಇಂದು ಬಿಡದಿಗೆ ಕರೆತಂದು ತನಿಖೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಮಧ್ಯೆ ಪ್ರಕರಣ ಬಯಲಾದ ನಂತರ ಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬೆಂಗಳೂರಿನ ಪೊಲೀಸರು ಶೋಧ ಕಾರ್ಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದ ಬಗ್ಗೆ ಚೆನ್ನೈನಲ್ಲಿ ಶನಿವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ ಲೆನಿನ್, ಬಿಡದಿ ಆಶ್ರಮದಲ್ಲೇ ರಾಸಲೀಲೆ ನಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ನಿತ್ಯಾನಂದ ಸ್ವಾಮಿ ನಡವಳಿಕೆ ಬಗ್ಗೆ ಬೇಸರ ವಾಗಿದ್ದು, ಅದಕ್ಕಾಗಿಯೇ ಆತನ ರಾಸಲೀಲೆಯ ಚಿತ್ರೀಕರಣ ಮಾಡಿರುವುದಾಗಿ ಸಮರ್ಥಿಕೊಂಡಿದ್ದಾರೆ. ಆತ ಸಲಿಂಗ ಕಾಮಿಯೂ ಆಗಿದ್ದಾನೆ ಎಂದು ಈ ಸಂದರ್ಭದಲ್ಲಿ ದೂರಿದ್ದಾರೆ.
ನಿತ್ಯಾನಂದನ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರಿಗೆ ದೂರು ನೀಡಿದ್ದು, ಸೆಕ್ಷನ್ 377, 120(ಬಿ)295, 376ಅಡಿಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಚೆನ್ನೈ ಪೋಲಿಸ್ ಕಮೀಷನರಿಗೆ ಇನ್ನಷ್ಟು ಸಿಡಿಗಳನ್ನು ನೀಡಿದ್ದು, ಸ್ವಾಮಿಯ ರಾಸಲೀಲೆಯಲ್ಲಿ ಮತ್ತಷ್ಟು ಚಿತ್ರನಟಿಯರು ಶಾಮೀಲಾಗಿರುವುದಾಗಿ ವಿವರಣೆ ನೀಡಿದ್ದಾರೆ. ನಿತ್ಯಾನಂದ ಹಾಗೂ ನಟಿ ರಂಜಿತಾ ಅವರ ಪ್ರಣಯದಾಟದ ಅಸಲಿ ವಿಡಿಯೋ ಸುಮಾರು 2ಗಂಟೆ 30ನಿಮಿಷ ಕಾಲ ಇದೆ. ಅದನ್ನು ಕಳೆದ ಡಿಸೆಂಬರ್ ತಿಂಗಳಿನಿಂದಲೇ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ..
ಏತನ್ಮಧ್ಯೆ ನಿತ್ಯಾನಂದ ಸ್ವಾಮೀಜಿ ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ರಾಜೇಂದ್ರನ್ ತಿಳಿಸಿದ್ದಾರೆ.