ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Thu, 03 Oct 2024 07:00:36  Office Staff   S O News

ಭಟ್ಕಳ: ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ  ಕಾರ್ಯಕ್ರಮವನ್ನು ಸಚಿವ ಮಂಕಾಳ್ ವೈದ್ಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮುಂಚೂಣಿಯಲ್ಲಿ ಇದ್ದವರು. ಇಂದಿಗೆ 100 ವರ್ಷಗಳ ಹಿಂದೆ ಬೆಳಗಾವಿಯಲಿ ಅಧಿವೇಶನ ಮಾಡಿ ಭಾರತದಿಂದ ಬ್ರಿಟಿಷ್ ರನ್ನು ಹೇಗೆ ಓಡಿಸಬೇಕು ಯೋಜನೆ ರೂಪಿಸಿದರು. ಸುಮ್ಮನೆ ಗಲಾಟೆ ದೊಂಬಿ ಮಾಡಿದರೆ ಸಾಧ್ಯವಿಲ್ಲ. ನಾವೆಲ್ಲ ಒಟ್ಟಾಗಿ ಬ್ರಿಟಿಷರನ್ನು ಓಡಿಸಬೇಕೆಂದು ಕಾಂಗ್ರೆಸ್ ಅಧಿವೇಶನ ಮಾಡಿದ್ದರು. 100 ವರ್ಷಗಳ ಹಿಂದೆ ಅವರು ಬ್ರಿಟಿಷರನ್ನು ಹೇಗೆ ಓಡಿಸ ಬೇಕು ಹಾಗೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಬೇಕು ಎಂದು ನಿರ್ಣಯ ಮಾಡಿದ್ದರು. ಆ  ವೇಳೆಯಲ್ಲಿ ಅವರು ಯೋಚನೆ ಮಾಡಿ ಎಲ್ಲರಿಗೂ ಒಂದು ಸಂದೇಶ ಕೊಟ್ಟಂತ ಮಹಾನ್ ವ್ಯಕ್ತಿ. ಶಾಂತಿಯಿಂದ ಯಾರಿಗೂ ಎಲ್ಲಿಯೂ ಕೂಡ ಭೇದ ಬಾವ ಆಗದಂತೆ. ಎಲ್ಲರೂ ಒಟ್ಟಾಗಿ ಬ್ರಿಟಿಷರನ್ನು ಒಡಿಸಬೇಕು ನಿರ್ಣಯ ಮಾಡಿದ್ದರು ಎಂದ ಅವರು ಇಡೀ ರಾಜ್ಯ ಹಾಗೂ ದೇಶದಲ್ಲಿ ಇಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರ 155ನೇ ಜನ್ಮ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ನಾವು ಕಾಂಗ್ರೆಸ್ ಪಕ್ಷದವರು ಎಲ್ಲಾ ಕಡೆಗಳಲ್ಲಿ ಸಾರ್ವಜನಿಕವಾಗಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಇದು ನಮ್ಮೆಲ್ಲರ ಯೋಗ ಎಂದು ಹೇಳಿದರು.

ಜಾಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷ  ಇಮ್ರಾನ್ ಲಂಕಾ ಮಾತನಾಡಿ, ನಾವು ಸಣ್ಣವರಿದ್ದಾಗ ಗಾಂಧಿ ಜಯಂತಿ ಕಾರ್ಯಕ್ರಮ ಮಾಡುತ್ತ ಗಾಂಧಿಜಿಯವರ ಆದರ್ಶ ಗುಣಗಳನ್ನು ಕೇಳುತ್ತ ಬಂದಿದ್ದೀವೇ. ಗಾಂಧೀಜಿ ಬ್ರಿಟಿಷರ ವಿರುದ್ದ ಹೋರಾಡುತ್ತ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದರು.

ತಂಜಿಮ್ ಅಧ್ಯಕ್ಷ ಇನಾಯತ್ ವುಲ್ಲಾ ಸಾಬಂದ್ರಿ ಮಾತನಾಡಿ, ಗಾಂಧೀಜಿಯವರ ಹೋರಾಟ ಎಲ್ಲಾ ವರ್ಗದ ಸಮಾಜದವರಿಗೂ ಸಮಾನತೆಗಾಗಿ ಹೋರಾಟ ಮಾಡಿದವರು, ಇಂದು ನಮ್ಮ ಸಮಾಜಕ್ಕೆ ಏನಾಗಬೇಕು ಎನ್ನುವುದನ್ನು ಗಾಂಧೀಜಿಯವರ ಸಂದೇಶ ಸಾರುವ ಕೆಲಸ ಮಾಡೋಣ ಎಂದರು. 

ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ವೆಂಕಟೇಶ ನಾಯ್ಕ ಮಾತನಾಡಿ ಮಾತನಾಡುತ್ತ, ಇವತ್ತು ಮಹಾತ್ಮ ಗಾಂಧೀಜಿಯವರು ನಮ್ಮ ಪಕ್ಷದ ನೇತೃತ್ವ ವಹಿಸಿ ಇಂದಿಗೆ 100ವರ್ಷ ಸಂದಿದೆ. ಗಾಂಧೀಜಿಯವರ ಬಗ್ಗೆ ಬಿಜೆಪಿಯವರು ಇಲ್ಲಸಲ್ಲದ ಮಾತುಗಳನ್ನು ಆಡುವುದು ಸರಿಯಲ್ಲ, ಅವರು ಮಾಡಿದ ಮಹತಕಾರ್ಯವನ್ನು ನಾವು ಪಾಲಿಸಿಕೊಂಡು ಹೋಗಬೇಕಾಗಿದೆ ಎಂದರು
ಇದಕ್ಕೂ ಪೂರ್ವದಲ್ಲಿ  ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀ ಯವರ ಫೋಟೋಗಳಿಗೆ ಪುಷ್ಪಾರ್ಚನೆ ಮಾಡಿದರು
ಕಾರ್ಯವನ್ನು ಗ್ಯಾರಂಟಿ ಅಧ್ಯಕ್ಷರಾದ ರಾಜು ನಾಯ್ಕ ಸ್ವಾಗತಿಸಿದರು. ಜಗದೀಶ ನಾಯ್ಕ ವಂದಿಸಿದರು
ಈ ಸಂದರ್ಭದಲ್ಲಿ  ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ನಯನಾ ನಾಯ್ಕ,  ಪುರಸಭಾ ಪ್ರಭಾರ ಅಧ್ಯಕ್ಷ ಅಲ್ತಾಪ್ ಖರೂರಿ, ನಾರಾಯಣ ನಾಯ್ಕ ಉಪಸ್ಥಿತರಿದ್ದರು


Share: