ಹಾಸನ-ಮಾ-೧೫. ಪುರುಷರಿಗೆ ಸರಿಸಮಾನವಾಗಿ ದುಡಿದರೂ ಗ್ರಾಮೀಣ ಪ್ರವೇಶದಲ್ಲಿನ ಶೇ.೮೦ರಷ್ಟು ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯಿಂದ ಹತ್ತಿಕ್ಕಲ್ಪಟ್ಟು ಮನೆಗೆ ದೂಡಲ್ಪಡುತ್ತಾರೆ ಎಂದು ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷ ಸಾಹಿತಿ ಸುಶೀಲ ಸೋಮಶೇಖರ್ ವಿಮಶಿಸಿದ್ದಾರೆ.
ಇಲ್ಲಿನ ರವೀಂದ್ರ ನಗರದಲ್ಲಿರುವ ಕಲಾ ನರಸಿಂಹ ಅವರ ಮನೆಯಲ್ಲಿ ಕುವೆಂಪು ಮಹಿಳಾ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನ. ಸಂಘದ ಸದಸ್ತತರ ನೇತ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಭೆ, ವಿವೇಚನೆ ಎಲ್ಲವೂ ಮೂಲೆಗುಂಪಾಗುತ್ತದೆ. ಯಾವುದೇ ಮಹಿಳೆಯ ಸಾಮರ್ಥ್ಯ. ಪ್ರತಿಭೆ, ಸಾಧನೆಯನ್ನು ಆಯಾಯ ಕುಟುಂಬದ ಪುರುಷರು ಗುರ್ತಿಸಿದಾಗ ಮಾತ್ರ ಸಾಮಾಜಿಕವಾಗಿ ಬೆಲೆ ಪಡೆದುಕೊಳ್ಳುತ್ತದೆ ಎಂದು ವಿಶ್ಲೇಷಿದರು.
ಮಹಿಳೆಯರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು ಬೇರೆಯದೇ ಆಗಿದೆ. ತಮ್ಮ ಹಕ್ಕು ಮತ್ತು ಆಸ್ತಿತ್ವಕ್ಕಾಗಿ ಹೋರಾಟ ಮಾಡಬೇಕು. ಆದರೆ ಅದು ಕ್ರಾಂತಿಕಾರಿ ಹೋರಾಟ ಆಗಬಾರದು. ತಮ್ಮ ಬಗ್ಗೆ ಹೆಗ್ಗಳಿಕೆ ಹೆಮ್ಮೆ ಇರಬೇಕು. ಅಹಂಕಾರ ಅಗಬಾರದು ಎಂದು ಉದಾಹರಣೆಯೊಂದಿಗೆ ತಿಳಿ ಹೇಳಿದರು. ಇಂದು ಕಲಿಕ ಉದ್ಯೋಗಸ್ಥ ಮಹಳೆ ಪುರುಷನ ಆಯ್ಕೆ ಆಗುತ್ತಿದ್ದಾಳೆ. ಪಲುರಷರ ಚಿತ್ರ ಮಹಿಳೆಯ ಪ್ರತಿಭೆಯನ್ನು ಗುರ್ತಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲೂ ಕಳೆದ ೭-೮ ವರ್ಷಗಳಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮನೆ ಬಿಟ್ಟು ಹೊರಬರಲು ಅಂಜುತ್ತಿದ್ದ ಬಸ್ ಬೋರ್ಡ್ ಓದಲು ಬಾರದೆ ಪರಿತಪಿಸುತ್ತದ್ದ ಮಹಿಳೆ ಇಂದು ಪಟ್ಟಣ ಪ್ರದೇಶದಲ್ಲಿನ ಬ್ಯಾಂಕ್‌ಗೆ ಏಕಾಂಗಿಯಾಗಿ ಬಂದು ವಹಿವಾಟು ನಡೆಸುವಷ್ಟು ಸಾಮರ್ಥ್ಯ ಪಡೆದಿದ್ದಾಳೆ. ಕುಟುಂಬದ ಹಲವು ಹೊರೆಯನ್ನು ಕಡಿಮೆ ಮಾಡುತ್ತಿದ್ದಾಳೆ. ಹೆಣ್ಣಿಲ್ಲದ ಸಂಸಾರ ಇಲ್ಲ. ತಕ್ಕಡಿಯಿಲ್ಲದೆ ವ್ಯಾಪಾರವಿಲ್ಲ ಇದು ಸತ್ಯ ಕೂಡಾ. ಆದರೆ ಮಹಿಳೆಗೆ ಧೈರ್ಯ ಇರಬೇಕು ಭಂಡ ದೈರ್ಯ ಬೇಡಾ, ಅತಿಯಾದ ಹಠ ಬೇಡಾ, ಇಡೀ ವಿಶ್ವದ ಕಣ್ಣು ಭಾರತೀಯ ಸಂಸ್ಕೃತಿ. ಪರಂಪರೆ, ಸಂಗೀತ, ದೃಶ್ಯ. ಜಾನಪದದ ಮೇಲೆ ಇದ್ದು ವಿವೇಚನೆಯಿಂದ ನಡೆದುಕೊಳ್ಳಬೇಕು. ಹದಿ ಹರೆಯದ ಹೆಣ್ಣು ಮಕ್ಕಳ ಮೇಲೆ ನಿಗಾ ಇರಬೇಕು. ಸ್ನೇಹದಿಂದ ತಿಳಿ ಹೇಳಬೇಕು. ಮಕ್ಕಳಿಗೆ ಸಂಸ್ಕಾರ ನೀಡಬೇಕು ತಾಯಿ ಮಗಳೊಂದಿಗೆ ಸೂಕ್ಷ್ಮವಾಗಿ ಸ್ಪಂಧಿಸಬೇಕು. ಮುಕ್ತವಾಗಿ ಬೆಳೆಯುವಂತೆ ಮನವೊಲಿಸಬೇಕು ಕರ್ತವ್ಯ ಮತ್ತು ಅರಿವಿನ ಮೂಲಕ ನಮ್ಮತ್ತ ತಿರುಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಪೂರ್ಣಿಮಾ, ಡಾ.ಶಂಕರ್ ಮಾತನಾಡಿದರು. ಕೇಂದ್ರ ಕೃಷಿ ಪ್ರಶಸ್ತಿ ವಿಜೇತೆ ಹೇಮಾ ಅನಂತ ರಾಜು ಅವರನ್ನು ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ರಾಜೇಶ್ವರಿಕಲಾ ನರಸಿಂಹ, ಲೀಲಾವತಿ, ಜಯ ರಮೇಶ, ಸರಸ್ವತಿ ಸೇರಿದಂತೆ ಸಂಘದ ೧೫ಕ್ಕೂ ಹೆಚ್ಚು ಸದಸ್ಯೆಯರು ತಮ್ಮ ನೇತ್ರಗಳನ್ನು ದಾನ ಮಾಡಿದರುವ ಪತ್ರವನ್ನು ನೇತ್ರತಜ್ಞ ಡಾ.ಶಂಕರ್ ಅವರಿಗೆ ನೀಡಿದರು. ಅತಿಥೇಯರಾದ ಕಲಾ ನರಸಿಂಹ ಸ್ವಾಗತಿಸಿದರು. ಸರಸ್ವತಿ ಪ್ರಾರ್ಥಿಸಿದರು. ಜಯ ರಮೇಶ ನಿರೂಪಸಿದರು. ಲತಾ ವಂದಿಸಿದರು.