ಮಂಗಳೂರು, ನ.೨೫: ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಅಝ್ಹಾ(ಬಕ್ರೀದ್) ನ.೨೭ರಂದು ಜಿಲ್ಲೆಯಾದ್ಯಂತ ವಿಜೃಂಭಣೆ ಯಿಂದ ಆಚರಿಸುವ ಸಿದ್ದತೆಗಳು ನಡೆದಿವೆ. ಜಿಲ್ಲೆಯ ಎಲ್ಲ ಜುಮಾ ಮಸೀದಿ ಮತ್ತು ಪ್ರಮುಖ ಈದ್ಗಾ ಮೈದಾನಗಳಲ್ಲಿ ಈದ್ ನಮಾಝ್ ಮತ್ತು ಖುತುಬಾಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ ೮ ಗಂಟೆಗೆ ಮಂಗಳೂರು ಸಹಾಯಕ ಖಾಝಿಯವರ ನೇತೃತ್ವದಲ್ಲಿ ಈದುಲ್ ಅಝ್ಹಾ ನಮಾಝ್ ಮತ್ತು ಖುತುಬಾ ನಡೆಯಲಿದೆ. ಈದ್ ನಮಾಝ್ಗೆ ಆಗಮಿಸುವವರು ವುಝೂ ಮಾಡಿ ನಮಾಜಿಗೆ ಬೇಕಾದ ಮುಸಲ್ಲ ಮತ್ತಿತರ ಸಾಮಗ್ರಿಗಳನ್ನು ತರಬೇಕು. ಕುದ್ರೋಳಿ, ಬಂದರ್, ಕಂದುಕ, ಬೋಳಾರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಸ್ಜಿದ್ ಝೀನತ್ ಭಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಯೆನೆಪೋಯ ಅಬ್ದುಲ್ಲ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ: ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಅಲ್ಹಾಜ್ ಅಬ್ದುಲ್ ರವೂಫ್ ಮುಸ್ಲಿಯಾರ್ರ ನೇತೃತ್ವದಲ್ಲಿ ಬೆಳಗ್ಗೆ ೧೦ ಗಂಟೆಗೆ ಈದ್ ನಮಾಝ್ ಮತ್ತು ಖುತುಬಾ ನೆರವೇರಲಿದೆ. ಬೆಳಗ್ಗೆ ಸುಮಾರು ೯ ಗಂಟೆಗೆ ಕೋಟೆಪುರ ಮತ್ತು ಅಳೇಕಲದಿಂದ ಉಳ್ಳಾಲ ದರ್ಗಾ ವಠಾರಕ್ಕೆ ಮೆರವಣಿಗೆ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷ ಹಾಜಿ ಕಣಚೂರು ಮೋನು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತೊಕ್ಕೊಟ್ಟು: ತೊಕ್ಕೊಟ್ಟು ಮಸ್ಜಿದುಲ್ ಹುದಾ ವತಿಯಿಂದ ಬಬ್ಬುಕಟ್ಟೆಯ ಹಿರಾ ವಿಮೆನ್ಸ್ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ ೭:೪೫ಕ್ಕೆ ಈದ್ ನಮಾಝ್ ಮತ್ತು ಖುತುಬಾ ಪಾರಾಯಣ ನಡೆಯ ಲಿದೆ. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಖುತುಬಾ ನೆರವೇರಿಸಲಿದ್ದಾರೆ. ಮಹಿಳೆಯರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಅಲ್ಹುದಾ ಚಾರಿಟೇಬಲ್ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.
ಉಳ್ಳಾಲ: ಉಳ್ಳಾಲದ ಸಲ್ಸಬೀಲ್ ಈದ್ಗಾ ಮೈದಾನದಲ್ಲಿ ಬೆಳಗ್ಗೆ ೭:೪೫ಕ್ಕೆ ಈದ್ ನಮಾಝ್ ಮತ್ತು ಖುತುಬಾ ನಡೆಯಲಿದೆ ಎಂದು ಆಡಳಿತ ಸಮಿತಿಯ ಅಧ್ಯಕ್ಷ ಯು.ಎಂ.ಮೊದಿನ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೋಳಂಗಡಿ: ಬೋಳಂಗಡಿಯ ಹವ್ವಾ ಜುಮಾ ಮಸೀದಿಯಲ್ಲಿ ಬೆಳಗ್ಗೆ ೮ ಗಂಟೆಗೆ ಈದ್ ನಮಾಝ್ ನಿರ್ವಹಿಸಲಾಗುವುದು. ಮೌಲಾನಾ ಯಹ್ಯಾ ತಂಙಳ್ ಮದನಿ ಖುತುಬಾ ನಿರ್ವಹಿಸಲಿದ್ದಾರೆ.
ಉಪ್ಪಳ: ಮುತ್ತಿಲ್ ಹಾಸಿರ್ರವರ ನೇತೃತ್ವದಲ್ಲಿ ಬೆಳಗ್ಗೆ ೮ ಗಂಟೆಗೆ ಮನ್ನಕುಂಯಿಲ್ ಮೈದಾನದಲ್ಲಿ ಈದ್ ನಮಾಝ್ ನೆರವೇರಲಿದೆ ಎಂದು ಐಎಸ್ಎಂ ಉಪ್ಪಳ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.
ಉಡುಪಿ ಜಿಲ್ಲೆಯ ಜುಮಾ ಮಸೀದಿಗಳ
ಈದ್ ನಮಾಝ್ ಸಮಯ.
ಉಡುಪಿ ಜಾಮಿಯ ಮಸೀದಿ-ಬೆಳಗ್ಗೆ ೮:೦೦
ಉಡುಪಿ ಅಂಜುಮನ್ ಮಸೀದಿ-೮:೦೦
ಕಟಪಾಡಿ ಜುಮಾ ಮಸೀದಿ-೮:೩೦
ಮೂಳೂರು ಜುಮಾ ಮಸೀದಿ-೮:೩೦
ಮಲ್ಪೆ ಮದೀನಾ ಜಾಮಿಯಾ ಮಸೀದಿ-೮:೧೫
ಮಲ್ಪೆ ಅಬೂಬಕರ್ ಸಿದ್ದೀಕ್ ಜುಮಾ ಮಸೀದಿ-೮:೦೦
ಆತ್ರಾಡಿ ಜುಮಾ ಮಸೀದಿ-೮:೩೦
ಮಣಿಪುರ ಜುಮಾ ಮಸೀದಿ-೮:೩೦
ದೊಡ್ಡಣಗುಡ್ಡೆ ಜುಮಾ ಮಸೀದಿ-೮:೩೦
ಪಡುಬಿದ್ರೆ ಜುಮಾ ಮಸೀದಿ-೯:೦೦