ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಜಯನಗರದಲ್ಲಿ ಕಾರಿನ ಕಿಟಕಿ ಒಡೆದು ದರೋಡೆ - ಎರಡು ಲಕ್ಷ ರೂ. ದೋಚಿ ಪರಾರಿ

ಬೆಂಗಳೂರು: ಜಯನಗರದಲ್ಲಿ ಕಾರಿನ ಕಿಟಕಿ ಒಡೆದು ದರೋಡೆ - ಎರಡು ಲಕ್ಷ ರೂ. ದೋಚಿ ಪರಾರಿ

Sun, 18 Apr 2010 03:25:00  Office Staff   S.O. News Service

ಬೆಂಗಳೂರು, ಏ. ೧೭: ಕಾರಿನ ಕಿಟಕಿಗಾಜು ಒಡೆದ ದುಷ್ಕರ್ಮಿಗಳು ಒಳಗಿದ್ದ ಎರಡು ಲಕ್ಷ ರೂ. ನಗದು ದೋಚಿ ಪರಾರಿ ಯಾರಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

 

ಡಾ. ಶಿವಕುಮಾರ್ (೪೫) ಎಂಬುವವರ ಕಾ‌ಇನಗಾಜು ಒಡೆದು ದುಷ್ಕಮಿಗಳು ಈ ಕೃತ್ಯ ಎಸಗಿದ್ದಾರೆ.

ಜೆ.ಪಿ‌ಇ. ನಗರ, ಕೆ.ಎಸ್.ಆರ್.ಟಿ.ಸಿ. ಬಡಾವಣೆಯಲ್ಲಿ ವಾಸವಿರುವ ಡಾ. ಶಿವಕುಮಾರ್ ಇಂದು ಬೆಳಿಗೆ ಕಂಪ್ಯೂಟರ್ ರಿಪೇರಿ ಮಾಡಿಸಲೆಂದು ಕಾರು ಚಾಲಕ ಸುರೇಶ್‌ನೊಂದಿಗೆ ಜಯನಗರದ ೪ನೇ ಬ್ಲಾಕ್ ಬಳಿ ಕಾರಿನಲ್ಲಿ ಹೊರಟರು.

 

ದಾರಿ ಮಧ್ಯೆ ಜೆ.ಪಿ. ನಗರ ೨೪ನೇ ಅಡ್ಡ ರಸ್ತೆಯಲ್ಲಿರುವ ಎಚ್.ಡಿ‌ಎಫ್.ಸಿ. ಬ್ಯಾಂಕ್‌ನಿಂದ ೨ ಲಕ್ಷ ರೂ. ಡ್ರಾ ಮಾಡಿಕೊಂಡು ನಂತರ, ಜಯನಗರಕ್ಕೆ ತೆರಳಿದ ಅವರು ಡ್ರಾ ಮಾಡಿದ ನಗದನ್ನು ಕಾರಿನಲ್ಲೇ ಬಿಟ್ಟು ಕಂಪ್ಯೂಟರ್ ರಿಪೇರಿ ಮಾಡಿಸಿಕೊಂಡು ಬರಲು ಹೋದರು.

 

ಇದೇ ವೇಳೆ ಚಾಲಕ ಕಾರನ್ನು ಪಾರ್ಕ್ ಮಾಡಿ ಅತ ಕಡೆ ನಡೆದಾಗ, ಸಂಚುರೂಪಿಸಿದ ಕಳ್ಳರು ಕಾರಿನಗಾಜು ಒಡೆದು ಹಣವಿದ್ದ ಬ್ರೀಫ್‌ಕೇಸ್ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಶಿವಕುಮಾರ್ ಅರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Share: