ಭಟ್ಕಳ, ಜನವರಿ 29:ಇಲ್ಲಿನ ಮಣ್ಕುಳಿಕೇರಿಯ ರಾ.ಹೆ.೧೭ರಲ್ಲಿನ ಶ್ರೀದೇವಿ ಆಟೋ ಸರ್ವಿಸಸ್ ಪೆಟ್ರೋಲ್ ಬಂಕ್ ನಲ್ಲಿ ಡಿಸೆಲ್ ನಲ್ಲಿ ಸೀಮೆ ಎಣ್ಣೆಯನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಮಾರು 20 ಹೆಚ್ಚು ಆಟೋ ರಿಕ್ಷ ಚಾಲಕರು ಪೆಟ್ರೋಲ್ ಬಂಕ್ ಮುಂದೆ ಜಮಾಯಿಸಿ ಪೆಟ್ರೊಲ್ ಬಂಕ್ ಮ್ಯಾನೆಜರ್ ನೊಂದಿಗೆ ಮಾತಿನ ಚಕಮಕಿಯುಂಟಾಗಿದ್ದು ಪೊಲೀಸರ ಮಧ್ಯೆಸ್ಥಿಕೆಯಿಂದಾಗಿ ವಾತವರಣ ತಿಳಿಯಾದ ಘಟನೆ ಇಂದು ಸಂಜೆ ೫-೩೦ ಕ್ಕೆ ಜರುಗಿದೆ.
ರಮೇಶ್, ರಾಘವೇಂದ್ರ ಶೆಟ್ಟಿ, ಹೊನ್ನಯ್ಯ, ಗಣಪತಿ ದೇವಾಡಿಗ ಸಂತೂ ಗೋಪಾಲ, ಗೋಪಾಲ್ ನಾಯ್ಕ ಸೇರಿದಂತೆ ಇನ್ನಿತರ ಆಟೋ ಚಾಲಕರು ತಾವು ಇಂದು ತಮ್ಮ ಆಟೋಗಳಿಗೆ ಡಿಸೆಲ್ ತುಂಬಿಸುವಾಗ ಅದರಿಂದ ಸೀಮೆ ಎಣ್ಣೆ ವಾಸನೆ ಬರುತ್ತಿದ್ದು ಇದರಲ್ಲಿ ಸೀಮೆ ಎಣ್ಣೆಯನ್ನು ಬೆರೆಸಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿಷಯ ತಿಳಿದ ಪೊಲಿಸರು ಕೂಡಲೆ ಸ್ಥಳಕ್ಕಾಗಮಿಸಿದ್ದು ಡಿಸೆಲ್ ನ ಸ್ಯಾಂಪಲ್ ತೆಗೆದು ಮಂಗಳೂರಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ನಂತರೆ ಇದರಲ್ಲಿ ಸೀಮೆ ಎಣ್ಣೆ ಬೆರೆತಿದೆಯೋ ಇಲ್ಲವೋ ಎಂಬುದು ನಿರ್ಧರಿಸಬಹುದು ಅಲ್ಲಿಯವರೆಗೆ ಯಾರೂ ಸಹ ಗಲಾಟೆಯನ್ನು ಮಾಡದೆ ಶಾಂತತೆಯನ್ನು ಕಾಪಾಡಿಕೊಂಡು ಬರುವಂತೆ ಆಟೋ ಚಾಲಕರಿಗೆ ತಿಳಿಸಿದ್ದು ಮುಂದಿನ ಕ್ರಮಕ್ಕಾಗಿ ಡಿಸೆಲ್ ನ ಸ್ಯಾಂಪಲನ್ನು ಆಹಾರ ನಿರೀಕ್ಷಕ ಶಂಕ್ರಪ್ಪ ನವರ ಮುಂದೆ ಪಂಚನಾಮೆಯನ್ನು ನಡೆಸಿದ ಬಳಿಕ ಮಂಗಳೂರಿಗೆ ರವಾನಿಸಲಾಗಿದೆ.
ಡಿಸೆಲ್ ಮತ್ತು ಪೆಟ್ರೋಲ್ ಗಳಲ್ಲಿ ಸೀಮೆ ಎಣ್ಣೆಯನ್ನು ಬೆರೆಸಿ ಮಾರಾಟ ಮಾಡುವ ಕೆಟ್ಟಚಾಳಿಯ ಪೆಟ್ರೋಲ್ ಬಂಕ್ ಮಾಲಿಕರಲ್ಲಿದೆ ಇದರಿಂದ ಅವರಿಗೆ ಅವರಿಗೆ ಲಾಭವಾಗಬಹುದು ಆದರೆ ಆಟೋ ಚಾಲಕರು ಬಹಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಸ್ಥಳದಲ್ಲಿ ಸೇರಿದ ಆಟೋ ಚಾಲಕರು ಹೇಳುತ್ತಿದ್ದರು. ಕಲಬೆರಕೆ ಡಿಸೆಲ್ ನಿಂದಾಗಿ ವಾಹನದ ಇಂಜಿನ್ ಹಾಳಾಗುತ್ತಿದ್ದು ಆಟೋವನ್ನೆ ನಂಬಿ ಜೀವಿಸುವ ನಮಗೆ ಜೀವನ ಸಾಗಿಸುವುದು ಕಷ್ಟವಾಗುವುದು ಎಂದು ರಮೇಶ ಎಂಬ ಆಟೋಚಾಲಕರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಡಿಸೆಲ್ ನಲ್ಲಿ ಸೀಮೆ ಎಣ್ಣೆಯನ್ನು ಬೆರೆಸಿದ ಆರೋಪದ ಕುರಿತು ಶ್ರೀದೇವಿ ಆಟೋ ಸರ್ವಿಸಸ್ ನ ರಾಮ ನಾರಾಯಣ ಮೊಗರ್ ಪ್ರತಿಕ್ರಿಯಿಸಿದ್ದು ಹೀಗೆ: ನಮ್ಮ ಬಂಕ್ ನಲ್ಲಿ ಮೊದಲಿನಿಂದಲೂ ಇದೆ ಡಿಸೆಲ್ ಮಾರಾಟ ಮಾಡಲಾಗುತ್ತಿದೆ. ಮತ್ತು ಅದರಲ್ಲಿ ಯಾವುದೆ ವಸ್ತುವನ್ನು ಕಲಬೆರಕೆಮಾಡಲಾಗಿಲ್ಲ ನೀವು ಯಾವುದೆ ಪ್ರಯೋಗಲಾಯಕ್ಕೆ ಕಳುಹಿಸಿ ಶುದ್ದವಾದ ಡಿಸೆಲ್ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಗರ ಠಾಣೆಯ ಪಿ.ಎಸ್.ಐ ಮಂಜುನಾಥ್ ಗೌಡ, ಎಸ್.ಐ.ಉಮೇಶ್ ಆಹಾರ ನಿರೀಕ್ಷಕ ಶಂಕ್ರಪ್ಪ ಮಂತಾದವರು ಹಾಜರಿದ್ದರು.