ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

Wed, 21 Apr 2010 14:52:00  Office Staff   S.O. News Service

ಬೆಳಗಾವಿ:ಏಪ್ರಿಲ್:೨೧:  ೨೦೧೦-೧೧ ನೇ ಸಾಲಿನಲ್ಲಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆಗೆ ಅರ್ಜಿ ಸಲ್ಲಿಕೆ ದಿನಾಂಕ ಏಪ್ರಿಲ್ ೩೦ ರವರೆಗೆ ವಿಸ್ತರಿಸಲಾಗಿದೆ.  
     ಶಿಕ್ಷಕರ ಅನುಕೂಲಕ್ಕಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಉಪನಿರ್ದೇಶಕರ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಕಚೇರಿಗಳ ದೂರವಾಣಿ/ಸಹಾಯವಾಣಿ/ ಕೇಂದ್ರಗಳ ವಿವರ ಇಂತಿದೆ.
       ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ-ಮ್ಯಾನೇಜರ್ ಶ್ರೀ. ಎನ್.ಕೆ. ತಹಸೀಲದಾರ ಸಹಾಯವಾಣಿ ಸಂಖ್ಯೆ: ೦೮೩೧-೨೪೫೧೪೫೨, ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ-ಅಧೀಕ್ಷಕ ಶ್ರೀ. ಪಿ.ಎಲ್. ರಾಠೋಡ ಸಹಾಯವಾಣಿ ಸಂಖ್ಯೆ: ೦೮೩೧-೨೪೨೩೮೧೪, ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ-ಮ್ಯಾನೇಜರ್ ಶ್ರೀ.ಎ.ಎನ್. ಕುಲಕರ್ಣಿ ಸಹಾಯವಾಣಿ ಸಂಖ್ಯೆ: ೦೮೨೮೮-೨೩೩೨೪೯ ಹಾಗೂ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ-ಮ್ಯಾನೇಜರ್ ಶ್ರೀ. ಟಿ.ಎಲ್. ಮಂಜುನಾಥ ಸಹಾಯವಾಣಿ ಸಂಖ್ಯೆ: ೦೮೩೩೬-೨೨೨೩೦೭ ಗೆ ಸಂಪರ್ಕಿಸಬೇಕು.
    ಅದರಂತೆ ರಾಮದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ-ಮ್ಯಾನೇಜರ್ ಶ್ರೀ. ಬಿ.ಜಿ. ದಾಸರ ಸಹಾಯವಾಣಿ ಸಂಖ್ಯೆ: ೦೮೩೩೫-೨೪೨೦೪೯, ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ-ಮ್ಯಾನೇಜರ್ ಶ್ರೀ. ರಾಮರಾವ ಸಹಾಯವಾಣಿ ಸಂಖ್ಯೆ: ೦೮೩೩೦-೨೨೨೪೦೯ ಹಾಗೂ ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ (ದ) ಜಿ.ಎ. ಶ್ರೀಮತಿ. ಎಸ್.ಎಸ್. ಕುಂದರಗಿ, ಅಧೀಕ್ಷಕ ಶ್ರೀ. ಆರ್.ಡಿ.ಗಣಾಚಾರಿ ಸಹಾಯವಾಣಿ ಸಂಖ್ಯೆ: ೦೮೩೧-೨೪೭೨೦೫೪ ಗೆ ಸಂಪರ್ಕಿಸಲು ಕೋರಲಾಗಿದೆ.
      ವರ್ಗಾವಣೆ ಅರ್ಜಿಗಳನ್ನು ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಏಪ್ರಿಲ್ ೩೦ ರವರೆಗೆ ವಿಸ್ತರಿಸಲಾಗಿದೆ. ಎಂದು ಬೆಳಗಾವಿ (ದ) ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.               


Share: