ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿ ವಾಪ್ತಿಯ ಕಂಡೆಕೋಡ್ಲುವಿನಲ್ಲಿ ಗುರುವಾರ ರಾತ್ರಿ ಮನೆ ಹಿಂಬದಿಯಿಂದ ಜಿಗಿದು ಬಂದ ಚಿರತೆ ಸಾಕು ನಾಯಿಯನ್ನು ತಿಂದು ಹೋಗಿದೆ. ಕಂಡೆಕೊಡ್ಲು ನಿವಾಸಿ ಅನಂತ ನಾಯ್ಕ ಅವರ ಮನೆಯ ಸಾಕಿದ ನಾಯಿ ಚಿರತೆಗೆ ಬಲಿಯಾಗಿದೆ.
ರಾತ್ರಿ 11 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ಸಮಯದಲ್ಲಿ ಮನೆಯ ಹಿಂಬದಿಯಿಂದ ಜಿಗಿದು ಬಂದ ಚಿರತೆ, ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿದ್ದ ಸಾಕು ನಾಯಿಯನ್ನು ತಿಂದಿದೆ. ನಾಯಿಗೆ ಚೈನು ಹಾಕಿ ಕಟ್ಟಿದ್ದರಿಮದ ಚಿರತೆಗೆ ನಾಯಿಯನ್ನು ಎಳೆದೊಯ್ಯಲು ಸಾಧ್ಯವಾಗಿಲ್ಲ. ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಆತಂಕ್ಕೀಡಾಗಿದ್ದು, ಚಿರತೆ ದಾಳಿ ತಡೆಯಲು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.