ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಎಡಿಜಿಪಿ ಎಂ.ಚಂದ್ರಶೇಖರ್ ಅಮಾನತಿಗೆ ಆಗ್ರಹಿಸಿ ಜೆಡಿಎಸ್ ಭಟ್ಕಳ ಘಟಕದಿಂದ ಮನವಿ

ಭಟ್ಕಳ:ಎಡಿಜಿಪಿ ಎಂ.ಚಂದ್ರಶೇಖರ್ ಅಮಾನತಿಗೆ ಆಗ್ರಹಿಸಿ ಜೆಡಿಎಸ್ ಭಟ್ಕಳ ಘಟಕದಿಂದ ಮನವಿ

Fri, 04 Oct 2024 04:30:23  Office Staff   S O News

ಭಟ್ಕಳ: ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ  ಎಂ. ಚಂದ್ರಶೇಖರ್ ರವರನ್ನು ಕೂಡಲೇ ಭಾರತಿಯ ಸೇವೆಯಿಂದ ಅಮನತುಗೊಳಿಸಿ
ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಾತ್ಯಾತೀತ ಜನತಾ ದಳ ಭಟ್ಕಳ ಘಟಕದವತಿಯಿಂದ ಸಹಾಯ ಆಯುಕ್ತರ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಮನವಿ  ಸಲ್ಲಿಸಿದರು.

ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತ ವಿಶೇಷ ತನಿಖಾ ಮುಖ್ಯಸ್ಥ ಎಡಿಜಿಪಿ ಆಗಿ ಕಾರ್ಯನಿರ್ವಸುತ್ತಿರುವ ಶ್ರೀ ಎಂ. ಚಂದ್ರಶೇಖರ್ ಇವರ ಭ್ರಷ್ಟಚಾರ ಸುಲಿಗೆ, ದುರ್ನಡತೆ ಮುಂತಾದ ಕ್ರಿಮಿನಲ್ ಕೇಸಗಳಲ್ಲಿ ಭಾಗಿಯಾಗಿರುವರನ್ನು ಅಮಾನತುಗೊಳಿಸಿ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜೆ ಡಿ ಎಸ್ ಪಕ್ಷ ಭಟ್ಕಳ ಘಟಕ ಆಗ್ರಹಸಿದೆ.

ಈಗಾಗಲೇ 30-09-2024 ರಂದು ನಮ್ಮ ಕರ್ನಾಟಕ ಜನತಾದಳ ಜಾತ್ಯತೀತ ಪಕ್ಷದ ಶಾಸಕಾಂಗ ನಾಯಕರಾದ  ಸುರೇಶ ಬಾಬು ಸಿ. ಬಿ.  ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರಕಾರ ವಿಧಾನ ಸೌಧ ಇವರಿಗೆ ಪತ್ರ ಬರೆದು ಈ ಭ್ರಷ್ಟ ಅಧಿಕಾರಿಯ ಚಾರಿತ್ಯೆಯನ್ನು ವಿವರವಾಗಿ ತಿಳಿಸಿರುತ್ತಾರೆ (ಪತ್ರದ ಪ್ರತಿಯನ್ನು ಲಗತ್ತಿರುತ್ತೇವೆ) ಈ ಎಲ್ಲಾ ಅಂಶಗಳನ್ನ ಮನಗಂಡು ಭಷ್ಟ ಅಧಿಕಾರಿಯ ಕಾರ್ಯವೈಖರಿಯನ್ನು ಜೆ ಡಿ ಎಸ್ ಪಕ್ಷ ಭಟ್ಕಳ ಘಟಕ ಖಂಡಿಸುತ್ತದೆ ಮತ್ತು ಅವರ ವಿರುದ್ಧ ಕ್ರಮ ಜರುಗಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಶಿಫಾರಸ್ಸಿನೊಂದಿಗೆ ಕಳುಹಿಸಲು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಮನವಿ ಬಳಿಕ ಭಟ್ಕಳ ಘಟಕದ ಜೆಡಿಎಸ್ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ನಮ್ಮ ಜೆಡಿಎಸ್ ನಾಯಕ ಕುಮಾರ ಸ್ವಾಮಿಯವರಿಗೆ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ  ಎಂ. ಚಂದ್ರಶೇಖರ್ ಅವಹೇಳನಕಾರಿ ಶಬ್ದ ಉಪಯೋಗಿಸಿ ಮಾತನಾಡಿರುವುದನ್ನು ನಮ್ಮ ಭಟ್ಕಳ ಘಟಕದಿಂದ ಖಂಡಿಸುತ್ತೇವೆ ಎಂದರು.

ನಂತರ ಜೆಡಿಎಸ್ ಮುಖಂಡ ಪಾಂಡು ನಾಯ್ಕ ಮಾತನಾಡಿ ಕುಮಾರ ಸ್ವಾಮಿಯವರಿಗೆ ಅವಹೇಳನಕಾರಿ ಶಬ್ದದಿಂದ (ಹಂದಿ) ಎಂದು ಉಲ್ಲೇಖ ಮಾಡಿದ ಲೋಕಾಯುಕ್ತ ಎಡಿಜಿಪಿ  ಎಂ. ಚಂದ್ರಶೇಖರ ವಿರುದ್ಧ ಭಟ್ಕಳ ಜೆಡಿಎಸ್ ಘಟಕದವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ನೀಡಿದ್ದೇವೆ. ಅವರ ಹೇಳಿಕೆಯನ್ನು ಭಟ್ಕಳ ಜೆಡಿಎಸ್ ಘಟಕ ಉಗ್ರವಾಗಿ ಖಂಡಿಸುತ್ತದೆ ಹಾಗೂ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಕುಮಾರ ಸ್ವಾಮಿ ಉನ್ನತ ಹುದ್ದೆಯಲ್ಲಿದ್ದು ಇಂತಹವರ ವಿರುದ್ಧ ನೀಚ ಹೇಳಿಕೆ ನೀಡಿರುವ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು


Share: