ಬಳ್ಳಾರಿ, ಅಕ್ಟೋಬರ್ ೩೧: ಬಿಜೆಪಿಯ ‘ಬಳ್ಳಾರಿ ಮತ್ತು ಬೆಂಗಳೂರು’ ಬಣದ ನಡುವಿನ ಜಗಳದಲ್ಲಿ ಈಗ ಇಬ್ಬರು ಮಹಿಳಾ ಪಟುಗಳ ಅಧಿಕೃತ ಪ್ರವೇಶವಾಗಿದೆ. ಅವರು ರಾಜ್ಯದ ಏಕೈಕ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಏಕೈಕ ಸಂಸದೆ ಜೆ.ಶಾಂತಾ. ಇಬ್ಬರೂ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಹರಿಸಿದ ವಾಗ್ಝರಿ ಇದು...
ಜೆ.ಶಾಂತಾ
ಬಿಜೆಪಿಯಲ್ಲಿ ಇಷ್ಟೆಲ್ಲಾ ಗೊಂದಲ ಆಗಿದ್ದು ಈಯಮ್ಮನಿಂದಲೇ...
ಮತ್ತೊಬ್ಬರ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಾ ಸೆಕೆಂಡ್ ಸಿಎಂರಂತೆ ವರ್ತಿಸುತ್ತಿದ್ದಾರೆ. ಈಯಮ್ಮ ಬಾಯಿ ಮುಚ್ಚಿಕೊಂಡಿದ್ದರೆ ಏನು ಹೋಗ್ತಿತ್ತು?
ನೆರೆ ಪರಿಹಾರದ ವಿಷಯದಲ್ಲಿ ಪ್ರತಿಯೊಂದರ ಉಸ್ತುವಾರಿಯನ್ನು ತಾನೇ ಹೊತ್ತಂತೆ ಆಡುತ್ತಿದ್ದ ಶೋಭಾ ಆಯಾ ಜಿಲ್ಲೆಯ ಸಚಿವರು ಸಂದದರು, ಶಾಸಕರನ್ನು ಕಡೆಗಣಿಸಿದ್ದರು.
ಶೋಭಾ ರಾಜೀನಾಮೆ ನೀಡಿದರೆ ಮಾತ್ರ ಪಕ್ಷದಲ್ಲಿ ತಲೆದೋರಿರುವ ಬಿಕ್ಕಟ್ಟು ನಿವಾರಣೆ ಸಾಧ್ಯ.
ಶೋಭಾ ಕರಂದ್ಲಾಜೆ
ನನ್ನಿಂದ ಎಲ್ಲಿ ತಪ್ಪಾಗಿದೆ ಎಂಬುದನ್ನು ವಿರೋಧಿಗಳು ಸ್ಪಷ್ಟವಾಗಿ ಹೇಳಲಿ.
ನನ್ನ ಇಲಾಖೆಯಲ್ಲಾಗಲೀ, ಕ್ಷೇತ್ರದಲ್ಲಾಗಲೀ ಭ್ರಷ್ಟಾಚಾರ ನಡೆಸದೇ ಏಳಿಗೆ ಸಾಧಿಸಿದ್ದೇನೆ. ಇದನ್ನು ಸಹಿಸದವರು ಷಡ್ಯಂತ್ರ ಮಾಡುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ ರಾಜ್ಯಾದ್ಯಂತ ಸಂಚರಿಸುವ ಹಕ್ಕು ನನಗಿದೆ. ಪ್ರವಾಹದಿಂದ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಿನ ಹಾನಿಯಾಗಿದೆ. ಹೀಗಾಗಿ ಪ್ರವಾಸ ಮಾಡಿದೆ.
ಯಾವ ತಪ್ಪಿಗಾಗಿ ನಾನು ರಾಜೀನಾಮೆ ನೀಡಬೇಕು? ಸಂಪುಟ ತ್ಯಜಿಸುವ ಪ್ರಶ್ನೆಯೇ ಇಲ್ಲ.
ಕೃಪೆ: ಕನ್ನಡಪ್ರಭ