ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದ ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಜೆ. ಸೈಯದ್ ಖಾಲಿದ್ ನಿಧನ

ಭಟ್ಕಳದ ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಜೆ. ಸೈಯದ್ ಖಾಲಿದ್ ನಿಧನ

Sat, 26 Oct 2024 20:47:35  Office Staff   SOnews

 

ಭಟ್ಕಳ: ಭಟ್ಕಳದ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಹಾಗೂ ಮಜ್ಲಿಸ್ ಇಸ್ಲಾಹ್-ಒ-ತಂಜೀಮ್‌ನ ಮಾಜಿ ಪ್ರಧಾನ ಕಾರ್ಯದರ್ಶಿ, ಜನಾಬ್ ಎಸ್.ಜೆ. ಸೈಯದ್ ಖಾಲಿದ್ (85) ಶನಿವಾರ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.

ಸುಮಾರು 28 ‌ವರ್ಷಗಳ ಕಾಲ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡು  ಅಲ್ಲಿ ನವಾಯತ್ ಸಮುದಾಯದ ಮರ್ಕಝಿ ಅನ್ ನವಾಯತ್ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಟ್ಕಳ ಮುಸ್ಲಿಮ್ ಜಮಾಅತೆ ಅಬುಧಾಬಿ ಯ ಎರಡು ಅವಧಿ ಕಾರ್ಯದರ್ಶಿಯಾಗಿ ಹಾಗೂ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅವರ ನಿಧನಕ್ಕೆ ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್‌ನ ಅಧ್ಯಕ್ಷ  ಮುಹಮ್ಮದ್ ಫಾರೂಕ್ ಮಿಸ್ಬಾಹ್, ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಮುನಿರಿ,  ಮಜ್ಲಿಸ್ ಇಸ್ಲಾಹ್-ಒ-ತಂಜೀಮ್‌ನ ಅಧ್ಯಕ್ಷ ಇನಾಯತುಲ್ಲಾ ಶಾಬಂದರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸೈಯದ್ ಖಾಲಿದ್, 2002ರಲ್ಲಿ ಭಟ್ಕಳಕ್ಕೆ ಮರಳಿದ ನಂತರ ಸಮಾಜದ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದರು. 2009ರಲ್ಲಿ ಅವರು ಮಜ್ಲಿಸ್ ಇಸ್ಲಾಹ್-ಒ-ತಂಜೀಮ್‌ನ ಪ್ರಧನ  ಕಾರ್ಯದರ್ಶಿಯಾಗಿ ಆಯ್ಕೆಯಾದ್ದರು. ಅಂಜುಮನ್, ರಾಬಿತಾ ಸೂಸೈಟಿ ಸೇರಿದಂತೆ ಹಲವಾರು ಸಂಘನೆಗಳಲ್ಲಿ ಇವರು ತೊಡಗಿಸಿಕೊಂಡಿದ್ದರು.

ಅವರು ಪತ್ನಿ, ಏಳು ಪುತ್ರಿಯರು, ಓರ್ವ ಪುತ್ರ,  ಮೊಮ್ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರನ್ನು ಅಗಲಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಬೆಳಿಗ್ಗೆ 11 ಗಂಟೆಗೆ ದಿವಂಗತರಾದರು.

ಮೃತದೇಹವನ್ನು ಭಟ್ಕಳಕ್ಕೆ ತರಲಾಗಿದ್ದು, ಇಂದು ರಾತ್ರಿ 8 ಗಂಟೆಗೆ ಭಟ್ಕಳ ಜುಮಾ ಮಸೀದಿಯಲ್ಲಿ ಜನಾಜಾ ನಮಾಝ್ ನಡೆಯಲಿದ್ದು, ನಂತರ ಹಳೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Top of Form

Bottom of Form

 


Share: