ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ‌ಶೆಟರ್‌ ಮುರಿದು ಗ್ಯಾರೇಜ್ ಕಳ್ಳತನ:ಸಿಸಿಟಿವಿಯಲ್ಲಿ ಸೆರೆ

ಭಟ್ಕಳದಲ್ಲಿ ‌ಶೆಟರ್‌ ಮುರಿದು ಗ್ಯಾರೇಜ್ ಕಳ್ಳತನ:ಸಿಸಿಟಿವಿಯಲ್ಲಿ ಸೆರೆ

Mon, 04 Dec 2023 02:29:20  Office Staff   SO News

ಭಟ್ಕಳ: ಕಪ್ಪು ಬಣ್ಣದ ಪ್ಲಾಸ್ಟಿಕ್ ಮುಖ ಕವಚ ಧರಿಸಿದ ಕಳ್ಳರಿಬ್ಬರು ಗ್ಯಾರೇಜ್ ಶಟರ್ ಮುರಿದು ನಗದು ಹಾಗೂ ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ಮಣ್ಕುಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರು ಶಿವಾನಂದ ಗ್ಯಾರೇಜ್ ನಲ್ಲ ನಡೆದಿದ್ದು ಕಳ್ಳತನದ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಣ್ಕುಳಿಯ ಶಂಕರ  ಶೆಟ್ಟಿ ಮಾಲೀಕತ್ವದ ಗ್ಯಾರೇಜ್ ಇದಾಗಿದೆ. ಯಾರೋ ಕಳ್ಳರಿಬ್ಬರು ರಾತ್ರಿ ವೇಳೆ ಮುಸುಕುದಾರಿ ಕವಚ ಧರಿಸಿ ಗ್ಯಾರೇಜ್ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಕಪಾಟನ್ನು ಒಡೆದು ಕಪಾಟಿನಲ್ಲಿದ್ದ   ಸುಮಾರು ಒಂದು ಲಕ್ಷದ  ನಲವತ್ತು ಸಾವಿರ ನಗದು ಹಾಗೂ ಸ್ಯಾಮಸಂಗ್ ಗೆಲಕ್ಸಿ ಮೊಬೈಲ್ ಪೋನ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಆದರೆ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಕಲ್ಲರಲ್ಲಿ ಓರ್ವ ಕಳ್ಳ ತನ್ನ ಗುರುತು ಪತ್ತೆಯಾಗಿದಂತೆ ಸಿನಿಮಾದಲ್ಲಿ ಕಳ್ಳತನಕ್ಕೆ ಬಳಸುವ ಕಪ್ಪು ಬಣ್ಣದ ಪ್ಲಾಸ್ಟಿಕ್ ಮುಖ ಕವಚ ಧರಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮುಂಜಾನೆ ಗ್ಯಾರೇಜ್ ಬಳಿ ಬಂದು ನೋಡಿದಾಗ ಕಳ್ಳತನ ಆಗಿರುವುದು ತಿಳಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು . ನಂತರ ಮಧ್ಯಾಹ್ನ ವೇಳೆಗೆ ಕಾರವಾರದಿಂದ ಶ್ವಾನದಳ ತಂಡದಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಸೋಮನಾಥ ರಾಠೋಡ ತನಿಖೆ ಕೈಗೊಂಡಿದ್ದಾರೆ.


Share: