ಮಂಗಳೂರು, ನ, ೩ : ಒರ್ವ ಮಹಿಳೆ 12 ಗಂಟೆ ರಾತ್ರಿಗೆ ಒಬ್ಬಳೇ ನಡೆದಾಡುವ ಪರಿಸ್ಥಿತಿ ಬರುವ ದಿವಸ ನಮ್ಮ ದೇಶದಲ್ಲಿ ರಾಮರಾಜ್ಯದ ಕನಸು ನಿಜವಾಗುತ್ತದೆ ಎಂದು ಅಂದು ಮಹಾತ್ಮಾ ಗಾಂಧಿ ಹೇಳಿದ್ದರು.
ಆದರೆ ಇಂದಿನ ದಿನಗಳಲ್ಲಿ ಹಗಲಿನಲ್ಲಿ ಕೂಡ ಒರ್ವ ಮಹಿಳೆ ಒಬ್ಬಳೇ ನಡೆದಾಡಂತಹ ಪರಿಸ್ಥಿತಿ ಇರುವ, ಇಂತಹ ಸಂಧರ್ಭದಲ್ಲಿ ಮಹಿಳೆಯರು ತಮ್ಮ ಮುಂದಾಳುತ್ವದಲ್ಲಿ ಒಂದು ಪತ್ರಿಕೆ ನಡೆಸುವುದು ಒಂದು ಅದ್ಬುತ ಎಂದು ಖ್ಯಾತ ಸಾಹಿತಿ ಹಾಗೂ ಕತೆಗಾರ್ತಿ, ಮಣಿಪಾಲದ ಶ್ರೀಮತಿ ವೈದೇಹಿ ಇಂದಿಲ್ಲಿ ಅಭಿಪ್ರಾಯ ಪಟ್ಟರು.
ಅವರು ನಗರದಲ್ಲಿ ಅನುಪಮ ಮಹಿಳಾ ಮಾಸಿಕಕ್ಕೆ 10 ವರ್ಷ ತುಂಬಿರುವ ಈ ಸುಸಂಧರ್ಭದಲ್ಲಿ ಅವರ ( www.anupamamonthly.com ) ವೆಬ್ ಸೈಟ್ ಅನ್ನು ಉದ್ಘಾಟಿಸಿ ಈ ಮಾತುಗಳನ್ನು ನುಡಿದರು.
ಶಾಲಾ ಕಾಲೇಜುಗಳ ಹುಡುಗಿಯರು ಸ್ಕೂಲ್ ನಿಂದ ಮನೆಗೆ ಹಿಂದಿರುಗುವ ಬಗ್ಗೆ ಭಯ ಹೊಂದಿರುವ ಇಂಥ ಸಂಧರ್ಭಗಳಲ್ಲಿ ಅವರಿಗೆ ನೈತಿಕ ಧ್ಯೇರ್ಯ ಕೊಡುವ ಕೆಲಸವನ್ನು ಅನುಪಮದಂತಹ ಪತ್ರಿಕೆಯು ಮಾಡಬೇಕು,
ಮುಸ್ಲಿಂ ಹೆಣ್ಣುಮಕ್ಕಳು ಮುಖಕ್ಕೆ ಪರದೆ ಹಾಕುವುದು, ಹಿಂದುಗಳು ಪರದೆ ಹಾಕದಿರು ವುದು ಎರಡು ಒಂದೇ ಆದರೆ ಮನಸ್ಸಿನ ಪರದೆ ಕಿತ್ತುಹಾಕಿದಾಗ ಮಾತ್ರ ಒಂದು ಪತ್ರಿಕೆ ಮಾಡಲು ಸಾದ್ಯ,
ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮನ್ನು ತಾವು ಕಾಪಾಡುವುದೇ ತಮ್ಮ ನೈತಿಕತೆಗೆ ಸವಾಲಾಗಿದೆ ಎಂದು ಅವರು ಹೇಳಿದರು.
ಅನುಪಮ ಮಹಿಳಾ ಮಾಸಿಕದ ಗೌರವ ಸಂಪಾದಕಿ ಡಾ| ಅಯಿಶಾ ಭಾರತಿ ( ಭದ್ರಾವತಿ) ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎ.ಜೆ.ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ಸೈಕಾಲಜಿ ವಿಭಾಗದ ಡಾ| ಎಸ್.ಟಿ.ರೆಹನಾ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಮೊದಲಿಗೆ ಅನುಪಮ ಮಹಿಳಾ ಮಾಸಿಕದ ಪ್ರದಾನ ಸಂಪಾದಕಿ ಎಂ ಶಹನಾಝ್ ಅಥಿತಿಗಳನ್ನು ಸ್ವಾಗತಿಸಿದರು.
ಶಹೀದಾ.ಯು ಧನ್ಯವಾದ ಸಮರ್ಪಿಸಿದರು.
ಸೌಜನ್ಯ: ಗಲ್ಫ್ ಕನ್ನಡಿಗ
ತ ಸಾಹಿತಿ ಹಾಗೂ ಕತೆಗಾರ್ತಿ ಮಣಿಪಾಲದ ಶ್ರೀಮತಿ ವೈದೇಹಿ ಅವರಿಂದ ಅನುಪಮ ಮಹಿಳಾ ಮಾಸಿಕದ ವೆಬ್ ಸೈಟ್ ಗೆ ಚಾಲನೆ.