ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೈಕಗಳ ನಡುವೆ ಮುಖಾಮುಖಿ ಢಿಕ್ಕಿ:ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕಗಳ ನಡುವೆ ಮುಖಾಮುಖಿ ಢಿಕ್ಕಿ:ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

Wed, 20 Dec 2023 06:45:48  Office Staff   SO News

ಭಟ್ಕಳ: ಎರಡು ಬೈಕಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೋರ್ವ ಗಾಯಗೊಂಡಿರುವ ಘಟನೆ ಸಾಗರ ರಸ್ತೆಯ  ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕ ಸಮೀಪ ನಡೆದಿದೆ

ಮೃತ ವ್ಯಕ್ತಿಯನ್ನು ಶ್ರೀಧರ ಜಟ್ಟಪ್ಪ ನಾಯ್ಕ ಯಲ್ವಡಿಕವೂರ ನಿವಾಸಿ ಎಂದು ತಿಳಿದು ಬಂದಿದೆ. ಈತ 
ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಹೋಗುತ್ತಿದ್ದ ವೇಳೆ
ಕುಂಟವಾಣಿ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದವನು ವೇಗವನ್ನು ನಿಯಂತ್ರಿಸಲಾಗದೇ ಸಾಗರ ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕದ ಸಮೀಪ ಎದುರುನಿಂದ  ಶ್ರೀಧರ ಜಟ್ಟಪ್ಪ ನಾಯ್ಕ ಇವರ ಮೋಟಾರ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದುಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಗೊಂಡ.ಲೋಕೇಶ್ ಗೊಂಡನ್ನು ಸರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆ ಗೆ ಸಾಗಿಸಲಾಗಿದೆ.
ಮೃತ ಶ್ರೀಧರ್ ನಾಯ್ಕ    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಈ ಬಗ್ಗೆ
ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ


Share: