ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ:ಗಾನ ಕೋಗಿಲೆ ಲತಾ ಮಂಗೇಶ್ಕರ್‌ಗೆ ಫ್ರಾನ್ಸ್‌ನ ಅತ್ಯುನ್ನತ ಪ್ರಶಸ್ತಿ ‘ಫ್ರಾನ್ಸ್ ಆಫ್ ದಿ ಲೆಜನ್ ಆಫ್ ಆನರ್’

ನವದೆಹಲಿ:ಗಾನ ಕೋಗಿಲೆ ಲತಾ ಮಂಗೇಶ್ಕರ್‌ಗೆ ಫ್ರಾನ್ಸ್‌ನ ಅತ್ಯುನ್ನತ ಪ್ರಶಸ್ತಿ ‘ಫ್ರಾನ್ಸ್ ಆಫ್ ದಿ ಲೆಜನ್ ಆಫ್ ಆನರ್’

Mon, 30 Nov 2009 03:01:00  Office Staff   S.O. News Service
ನವದೆಹಲಿ: ಪ್ರಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಫ್ರಾನ್ಸ್‌ನ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರಿಗೆ ಫ್ರಾನ್ಸ್ ಸರ್ಕಾರ ’ಫ್ರಾನ್ಸ್ ಸೇನೆಯ ಗೌರವ ಅಧಿಕಾರಿ’ (ಆಫೀಸರ್ ಆಫ್ ದಿ ಲೆಜನ್ ಆಫ್ ಆನರ್) ಎಂಬ ಗೌರವವನ್ನು ನೀಡಿದೆ. ಈ ಗೌರವವನ್ನು ಡಿ.೨ರಂದು ಮುಂಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಜೆರೋಮ್ ಬೋನಫಾಂಟ್ ಪ್ರದಾನ ಮಾಡಲಿದ್ದಾರೆ.

‘ಜಗತ್ತಿನಾದ್ಯಂತದ ಅತ್ಯುತ್ತಮ ಕಲಾವಿದರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಫ್ರಾನ್ಸ್‌ನದ್ದು. 60 ವರ್ಷ ಕಾಲ ಲತಾ ಏಕಮೇವಾದ್ವಿತೀಯ ಗಾಯಕಿಯಾಗಿ ಮಾಡಿದ ಸಾಧನೆ ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ’ ಎಂದು ಜೆರೋಮ್ ಹೇಳಿದ್ದಾರೆ.

Share: