
ಭಟ್ಕಳ:ಬಾಂಗ್ಲಾ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಭಟ್ಕಳ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ, ಭಟ್ಕಳದ ಸಮಸ್ತ ಹಿಂದೂ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಟ್ಕಳ ಹಿಂದೂಗಳ ವಿರಾಟ ದರ್ಶನ ಕಂಡು ಬಂತು.
ಸುಮಾರು 7 ರಿಂದ 8 ಸಾವಿರದಷ್ಟು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಒಗ್ಗಟ್ಟನ್ನು ಪ್ರದರ್ಶಿಸಿದರು. ವ್ಯಾಪಾರಸ್ಥರು, ಆಟೋ ಚಾಲಕರು, ಕಾರ್ಮಿಕರು, ಹೋಟೆಲ್ ಉದ್ಯಮಿಗಳು, ಮೀನುಗಾರರು, ಹೀಗೆ ಪ್ರತಿಯೊಂದು ವರ್ಗ, ಸಮಾಜದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗಾಗಿ ಜಿಎಸ್‌ಬಿ ಸಮಾಜದಿಂದ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿ ಶಾಲು ಹಾಕಿಕೊಂಡ ಕಾರ್ಯಕರ್ತರು ಭಗವಾಧ್ವಜ ಹಿಡಿದುಕೊಂಡು ಮೆರವಣಿಗೆಯಲ್ಲಿ ಹೊರಟಾಗ ಕೇಸರಿ ಪಡೆಯ ಮಹಾಸಾಗರ ಹರಿದುಬರುತ್ತಿದ್ದಂತೆ ಕಂಡುಬಂತು. ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಶುದ್ದೀನ್ ವೃತ್ತದ ಮೂಲಕ ರಿಕ್ಷಾ ಚಾಲಕರ ಸಂಘದ ಗಣೇಶೋತ್ಸವ ಮೈದಾನಕ್ಕೆ ಬಂದು ತಲುಪಿತು.
ಗಣೇಶೋತ್ಸವ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಂಗಳೂರಿನ ಗುರುಪುರದ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಸಮುದ್ರವೇ ಹರಿದು ಬಂದ ಹಾಗೆ ಭಟ್ಕಳ ಹಿಂದು ಸಮಾಜ ಒಂದಾಗಿ ಬಂದಿರುವದನ್ನು ನೋಡಿದರೆ, ಇದೊಂದು ಸ್ಪಷ್ಟ ಸಂದೇಶ ಬಾಂಗ್ಲಾ ದೇಶಕ್ಕೆ ತಲುಪಲಿದೆ ಎಂದು ನುಡಿದರು. ಹಸೀನಾ ಬೇಗಮ್ ಭಾರತಕ್ಕೆ ಬಂದಕೂಡಲೆ ಯೂನುಸ್ ಎನ್ನುವ ಅಸಮರ್ಥ ನಾಯಕ ಬಾಂಗ್ಲಾ ದೇಶದ ಚುಕ್ಕಾಣಿ ಹಿಡಿದ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳನ್ನು ರಕ್ಷಿಸುವ ಕಾರ್ಯ ಮಾಡಬೇಕಿದ್ದ ಆತ ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿ ನರಮೇಧಕ್ಕೆ ಚಾಲನೆ ನೀಡಿದ್ದಾನೆ . ಜಗತ್ತಿನಾದ್ಯಂತ ಶಾಂತಿ ಮಂತ್ರವನ್ನು ಪಠಿಸುವ ಇಸ್ಕಾನ್ ಸಂಸ್ಥೆ ಬಾಂಗ್ಲಾದಲ್ಲೂ ಕಾರ್ಯ ನಡೆಸುತ್ತಿದೆ. ಜಾತಿ, ಮತ, ಪಂಥ ಬೇದವನ್ನು ಮರೆತು ಎಲ್ಲರಿಗೂ ಅನ್ನ ನೀಡಿದ ಸಂಸ್ಥೆಯ ಚಿನ್ಮಯಿ ಕೃಷ್ಣದಾಸನನ್ನು ಬಂಧಿಸಿದ್ದಾರೆ. ಬಾಂಗ್ಲಾದಲ್ಲಿ ಹಿಂದು ಹೆಣ್ಣು ಮಕ್ಕಳ ಅತ್ಯಾಚಾರ ದೌರ್ಜನ್ಯ ಮೀತಿ ಮೀರುತ್ತಿದೆ. ಕೋಮು ಪ್ರಚೋದನೆ ನೀಡಿ ಅಫೀಮಿನಂತೆ ದೌರ್ಜನ್ಯ ಎಸಗುವ ನಿಮಗೆ ಸದ್ಯದಲ್ಲೇ ಒಂದು ಗತಿ ಕಾದಿದೆ ಎಂದು ಎಚ್ಚರಿಸಿದರು.
ಭಟ್ಕಳದಲ್ಲೂ ಹಿಂದುಗಳು ಎಚ್ಚರಿಕೆಯಿಂದು ಇರಬೇಕು. ಸಂಘಟನೆ, ಸಂಪತ್ತು ಸಂತಾನವನ್ನು ಕಾಯ್ದುಕೊಳ್ಳಿ. ನಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವಂತ ಅತಿ ಮುಖ್ಯವಾದ ಸನ್ನಿವೇಶ ಇಂದು ನಿರ್ಮಾಣವಾಗಿದೆ. ಹಿಂದು ಸಮಾಜ ಸಂಘಟಿತವಾಗಿ, ಸದೃಢವಾಗಿದ್ದರೆ ಯಾರಿಗೂ ತೊಂದರೆ ಇಲ್ಲ. ನಾವು ಯಾರಿಗೂ ಕಿರುಕುಳ ಕೊಡುವ ಮನಸ್ಥಿತಿ ಹೊಂದಿಲ್ಲ. ಶಾಂತಿ ಮಂತ್ರವನ್ನು ನಾವು ಪಠಿಸಿದರೆ ಸಾಲದು. ಇನ್ನೊಂದು ಸಮಾಜವು ಅದಕ್ಕೆ ಕೈ ಜೋಡಿಸಬೇಕು. ಇಂದು ವಕ್ಸ್ ಎನ್ನುವದು ವಕ್ಕರಿಸಿಕೊಂಡು ಬರುತ್ತಿದೆ. ಅದರ ಕುರಿತು ಯಾರೂ ಮಾತನಾಡುತ್ತಿಲ್ಲ. ಇಲ್ಲಿ ನಮ್ಮ ನೆಲೆಯೇ ಭದ್ರವಿಲ್ಲ. ಆದರೆ ಭಾರತದಲ್ಲಿ ಸಮಗ್ರ ಪ್ರಧಾನಿ ಇರುವದರಿಂದ ನಮಗೆ ಭಯವಿಲ್ಲ ಎಂದು ಅವರು ಹೇಳಿದರು.
ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಪ್ರಮುಖ ಕಾರ್ಕಳದ ಶ್ರೀಕಾಂತ ಶೆಟ್ಟಿ ಮಾತನಾಡಿ, ಕೇಸರಿ ಹಾರಾಡುತ್ತಿರುವದು ಗಾಳಿಯಿಂದ ಅಂತ ತಿಳಿದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಸಹಸ್ರಾರು ಹಿಂದೂ ಕಾರ್ಯಕರ್ತರು ಬಲಿದಾನದ ಸಂದರ್ಭದಲ್ಲಿ ಅವರು ಚೆಲ್ಲಿದ ನೆತ್ತರಿನಿಂದ ಇದು ಹಾರಾಡುತ್ತಿದೆ. ಬಾಂಗ್ಲಾ ದೇಶವನ್ನು ಒಂದು ಸಮಯದಲ್ಲಿ ಕನ್ನಡಿಗರು ಆಳ್ವಿಕೆ ಮಾಡಿದ್ದಾರೆ. ಇಂದು ಕೂಡ ಕನ್ನಡಿಗರಾದ ನಾವು ಒಗ್ಗಟ್ಟಾಗಿ ಬಾಂಗ್ಲಾ ದೇಶಕ್ಕೆ ಸಂದೇಶ ರವಾನಿಸಬೇಕಿದೆ ಎಂದು ಅವರು ಹೇಳಿದರು.
ಬಂದ್ ಕರೆಗೆ ಯಶಸ್ವಿ ಪ್ರತಿಕ್ರಿಯೆ:ಪ್ರತಿಭಟನಾ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಳಿಕ ತಾಲೂಕಿನ ಸಮಸ್ತ ಹಿಂದು ಸಮಾಜ ಬಾಂದವರು ಮಧ್ಯಾಹ್ನ ನಂತರ ತಮ್ಮೆಲ್ಲ ವ್ಯಾಪಾರ ವಹಿವಾಟು ಕೆಲಸ ಕಾರ್ಯಗಳನ್ನು ಸ್ವಯಂಪ್ರೇರಣೆಯಿಂದ ಸ್ಥಗಿತಗೊಳಿಸಿ ಸಂಘಟಿತ ಹಾಗೂ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆಕೊಟ್ಟ ಹಿನ್ನೆಲೆಯಲ್ಲಿ ಹಿಂದೂ ಬಾಂದವರೆಲ್ಲ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಅದೇ ರೀತಿ ಈ ಮೆರವಣಿಗೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು
ಇದಕ್ಕೂ ಪೂರ್ವದಲ್ಲಿ ಮೆರವಣಿಗೆಯು ಇಲ್ಲಿನ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ವಿನಾಯಕ ರಂಗ ಮಂಟಪದಿಂದ ಹೂವಿನಪೇಟೆ ರಸ್ತೆ, ಮುಖ್ಯ ಪೇಟೆ ರಸ್ತೆಯಿಂದ ಮಾರಿಗುಡಿ ದೇವಸ್ಥಾನದ ಮಾರ್ಗವಾಗಿ ಭಟ್ಕಳ ಮುಖ್ಯ ಸರ್ಕಲ ತನಕ ಬಂದು ಅಲ್ಲಿಂದ ಹಳೆ ಬಸ್ ನಿಲ್ದಾಣದ ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ವೇದಿಕೆಯ ಗೆ ಬಂದು ಶಾಂತಿಯುತ ಬ್ರಹತ ಮೆರವಣಿಗೆ ನಡೆಯಲಿದೆ ಅಂತ್ಯಗೊಂಡಿತು. ಮೆರವಣಿಗೆ ಉದ್ದಕ್ಕೂ ಕೇಸರಿ ಪಡೆಯ ವಿರಾಟ ದರ್ಶನ ತೋರಿದು ಸುಮಾರು 7 ರಿಂದ 8 ಸಾವಿರ ಹಿಂದೂ ಬಾಂದವರು ಮೆರಣಿಗೆಯಲ್ಲಿ ಪಾಲ್ಗೊಂಡಿದ್ದರು
ಹಿಂದೂ ಮುಖಂಡ ಗೋವಿಂದ ಖಾರ್ವಿ, ವಿಶ್ವ ಹಿಂದೂ ಪರಿಷತ್ ಭಟ್ಕಳದ ಅಧ್ಯಕ್ಷ ರಾಮಕೃಷ್ಣ ನಾಯ್ಕ ಕಾರ್ಯಕ್ರಮದ ಸಹಸಂಚಾಲಕ ಜಯಂತ ಬೆಣಂದೂರು, ನಾಗೇಶ ನಾಯ್ಕ ಹೆಬಳೆ ಮಾತನಾಡಿದರು. ದಿವ್ಯಾ ದಿನೇಶ ನಾಯ್ಕ ಉಮೇಶ ಮುಂಡಳ್ಳಿ, ಪ್ರಾರ್ಥಿಸಿದರೆ ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಸಚಿವ ಶಿವಾನಂದ ನಾಯ್ಕ ಮಾಜಿ ಶಾಸಕ ಸುನೀಲ ನಾಯ್ಕ ೩೧ ಸಮಾಜದ ಮುಖಂಡರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.