ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಫೆ.೨೪ ಮತ್ತು ೨೫ ರಂದು  ಎರಡು ದಿನ "ನಾಮಧಾರಿ ಪ್ರೀಮಿಯರ್ ಲೀಗ್-೨೦೨೪ ಕ್ರಿಕೇಟ್ ಪಂದ್ಯಾವಳಿ

ಫೆ.೨೪ ಮತ್ತು ೨೫ ರಂದು  ಎರಡು ದಿನ "ನಾಮಧಾರಿ ಪ್ರೀಮಿಯರ್ ಲೀಗ್-೨೦೨೪ ಕ್ರಿಕೇಟ್ ಪಂದ್ಯಾವಳಿ

Fri, 23 Feb 2024 01:41:37  Office Staff   SOnews

 

ಭಟ್ಕಳ:  ಭಟ್ಕಳ ತಾಲೂಕಿನ ನಾಮಧಾರಿ ಸಮಾಜ ಬಾಂಧವರಿAದ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ "ನಾಮಧಾರಿ ಪ್ರೀಮಿಯರ್ ಲೀಗ್-೨೦೨೪ " ಫೆ. ೨೪  ಶುಕ್ರವಾರ ದಿಂದ ಫೆ.೨೫ ರ ತನಕ  ಶಿರಾಲಿಯ  ತಟ್ಟಿಹಕ್ಕಲ್ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.  

ಕಾರ್ಯಕ್ರಮವನ್ನು  ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷರಾದ ಅರುಣ ನಾಯ್ಕ ಉದ್ಘಾಟಿಸಲಿದ್ದಾರೆ. ಕ್ರೀಡಾಂಗಣವನ್ನು ಮಾಜಿ ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರಾದ ಸುಬ್ರಾಯ ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಮಾಜಿ ಶಾಸಕರಾದ ಶಿವಾನಂದ ನಾಯ್ಕ, ಆರ್.ಎನ್. ನಾಯ್ಕ, ಜೆ.ಡಿ.ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ನಾಗೇಂದ್ರ ನಾಯ್ಕ ಗೋಪಾಲ ನಾಯ್ಕ, ವೆಂಕಟೇಶ ನಾಯ್ಕ, ಈಶ್ವರ ನಾಯ್ಕ, ಮನಮೋಹನ ನಾಯ್ಕ  ಮತ್ತಿತರರು ಉಪಸ್ಥಿತರಿರುವರು.   
 


Share: