ಭಟ್ಕಳ, ಡಿಸೆಂಬರ್ 24:ಭಟ್ಕಳ ತಾಲೂಕಿನ ಯಲ್ವಡಿಕವೂರು ಪಂಚಾಯತ್ ವ್ಯಾಪ್ತಿಯ ಬೆಣಂದೂರು ಎಂಬಲ್ಲಿ ಅಬಕಾರಿ ಅಧಿಕಾರಿಗಳು ಎಂ80 ದ್ವಿಚಕ್ರ ವಹಾನವೊಂದರಲ್ಲಿ ಸಾಗಿಸುತ್ತಿದ್ದ ಸುಮಾರು 10ಲಿ ನಷ್ಟು ಕಳ್ಳಭಟ್ಟಿ ಸಾರಾಯಿಯನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದು ಆರೋಪಿಯು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಪರಾರಿಯಾದ ಆರೋಪಿತನನ್ನು ಪದ್ಮಯ್ಯ ಜಟ್ಟ ನಾಯ್ಕ ಎಂದು ಹೇಳಲಾಗುತ್ತಿದ್ದು ಈತನು ಬುಧವಾರದಂದು ಬೆಣಂದೂರು ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ಸಾಗಿಸುತ್ತಿದ್ದ ಎನ್ನಲಾಗಿದ್ದು ಖಚಿತ ಮಾಹಿತಿ ಮೆರೆಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ವಾಹನ ಸಮೇತ ಸಾರಾಯಿಯನ್ನು ವಶಪಡಿಸಿಕೊಂಡಿದ್ದು ಈ ಸಂಬರ್ಧಲ್ಲಿ ಆರೋಪಿಯು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ