ಬೆಂಗಳೂರು, ಏಪ್ರಿಲ್ ೨೯ : ೨೦೧೦-೧೧ ನೇ ಸಾಲಿನಲ್ಲಿ ಬಳ್ಳಾರಿ, ಭಾಗಲಕೋಟೆ, ಭದ್ರಾವತಿ, ಗುಲ್ಬರ್ಗಾ ಮಂಗಳೂರು, ಹುಬ್ಬಳ್ಳಿ.ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ೮ನೇ ತರಗತಿಗೆ ಪ್ರವೇಶ ಪಡೆಯಲಿಚ್ಚಿಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಕರ್ನಾಟಕ ಸರ್ಕಾರದಿಂದ ಅಂಗೀಕೃತವಾದ ಶಾಲೆಯಲ್ಲಿ ೦೧ ನೇ ತರಗತಿಯಿಂದ ೦೭ ನೇ ತರಗತಿಯ ಅವಧಿಯಲ್ಲಿ ಕನಿಷ್ಟ ೦೫ ವರ್ಷ ವ್ಯಾಸಂಗ ಮಾಡಿರಬೇಕು ಹಾಗೂ ೦೭ ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿಗಳನ್ನು ಮೇಲ್ಕಂಡ ಸಂಸ್ಥೆಗಳಲ್ಲಿ ದಿನಾಂಕ ೩೦-೪-೨೦೧೦ ರಿಂದ ದಿನಾಂಕ ೨೦-೫-೨೦೧೦ ರವರೆಗೆ ಪಡೆಯಬಹುದಾಗಿದ್ದು ಅರ್ಜಿ ಸಲ್ಲಿಸಲು ೨೦-೫-೨೦೧೦ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಯನ್ನು ಎಲ್ಲಾ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಪ್ರಿನ್ಸಿಪಾಲರಿಂದ ಪಡೆಯಬಹುದೆಂದು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.