ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ವಿದ್ಯಾರ್ಥಿನಿಲಯಗಳ ಸೇರ್ಪಡೆಗೆ ಅರ್ಜಿ ಆಹ್ವಾನ

ವಿದ್ಯಾರ್ಥಿನಿಲಯಗಳ ಸೇರ್ಪಡೆಗೆ ಅರ್ಜಿ ಆಹ್ವಾನ

Tue, 27 Apr 2010 17:34:00  Office Staff   S.O. News Service

ಮಂಗಳೂರು ಏಪ್ರಿಲ್ ೨೭:-ಮಂಗಳೂರು ತಾಲೂಕು ಪಂಚಾಯತ್ ಅಧೀನ ದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ೨೦೧೦-೧೧ನೇ ಸಾಲಿನಲ್ಲಿ ಸೇರ್ಪಡೆ ಬಯಸುವ ಹಿಂದುಳಿದ ವರ್ಗ ೧, ೨ಎ, ೨ಬಿ,೩ಎ,೩ಬಿ ಮತ್ತು ಪರಿಶಿಷ್ಟ ಜಾತಿ,ಪಂಗಡಗಳಿಗೆ ಸೇರಿದ ೫ನೇ ತರಗತಿಯಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಿದೆ. ಮೆ.ಪೋ. ಬಾಲಕರ/ಬಾಲಕಿಯರ ವಿದ್ಯಾರ್ಥಿ ನಿಲಯ ಕದ್ರಿ, ಕೂಳೂರು, ಮುಲ್ಕಿ, ಮೂಡಬಿದ್ರೆ, ಕಡಂದಲೆ, ದರೆಗುಡ್ಡೆ, ಉಳ್ಳಾಲ, ಸುಂಕದಕಟ್ಟೆ, ಗುರುಪುರ (ಬಾಲಕಿಯರು),ಅಶೋಕನಗರ (ಬಾಲಕಿಯರು),ಗುರುಕಂಬಳ (ಬಾಲಕಿಯರು),ಆಶ್ರಮ ಶಾಲೆ ಬಜಪೆ(೧ರಿಂದ ೪ ನೇತರಗತಿವರೆಗೆ ಇಲ್ಲಿ ಪ್ರವೇಶಕ್ಕೆ ಅವಕಾಶವಿದೆ. 
ಅರ್ಜಿಯೊಂದಿಗೆ ಅಭ್ಯರ್ಥಿಯ ತೇರ್ಗಡೆ ಹೊಂದಿರುವ ಅಂಕಪಟ್ಟಿ ನಕಲು ಮತ್ತು ತಹಸೀಲ್ದಾರರಿಂದ ಪಡೆದಿರುವ ಜಾತಿ ಆದಾಯ ದೃಢಪತ್ರದ ನಕಲು ನೀಡಬೇಕು. ವರ್ಗ ೧ ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಆದಾಯ ಮಿತಿ ಇರುವುದಿಲ್ಲ. ಉಳಿದಂತೆ ವರ್ಗ ೨ಎ, ೨ಬಿ,೩ಎ,೩ಬಿ ಗೆ ಸೇರಿರುವ ವಿದ್ಯಾರ್ಥಿಗಳ ಆದಾಯ ಮಿತಿ ವಾರ್ಷಿಕ ೧೫,೦೦೦/- ಮಿತಿಯೊಳಗಿರತಕ್ಕದ್ದು. ಅರ್ಜಿಗಳನ್ನು ವಿದ್ಯಾರ್ಥಿನಿಲಯಗಳಲ್ಲಿ ಅಥವಾ ತಾಲೂಕು ಪಂಚಾಯತ್ ಕಚೇರಿ, ಬಿಸಿ‌ಎಂ ವಿಭಾಗ ಮಂಗಳೂರು ಇಲ್ಲಿಂದ ಪಡೆದುಕೊಂಡು ೨೮-೫-೧೦ರೊಳಗೆ ಭರ್ತಿ ಮಾಡಿ ತಾಲೂಕು ಪಂಚಾಯತ್ ಕಚೇರಿಗೆ ಅಥವಾ ವಿದ್ಯಾರ್ಥಿ ನಿಲಯಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಮಂಗಳೂರು ಇವರನ್ನು ಸಂಪರ್ಕಿಸಬಹುದು.


Share: