ಕೆ
ಗದಗ: ಏ. ೨೯ : ಗದಗ ಜಿಲ್ಲೆಯಲ್ಲಿ ಜರುಗಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ ದಿ: ೨೮ ಕೊನೆಯದಿನವಾಗಿತ್ತು. ಏ. ೨೧ ರಿಂದ ಪ್ರಾರಂಭವಾದ ನಾಮಪತ್ರ ಸಲ್ಲಿಕೆಯ ಈ ಪ್ರಕ್ರಿಯೆಯಲ್ಲಿ ಜಿಲ್ಲೆಯ ೫ ತಾಲೂಕಿನ ೧೦೨ ಗ್ರಾಮ ಪಂಚಾಯತ್ಗಳ ೪೬೦ ವಾರ್ಡುಗಳ ೧೫೫೭ ಸದಸ್ಯ ಸ್ಥಾನಕ್ಕೆ ೬೨೪೩ ನಾಮಪತ್ರಗಳು ಸಲ್ಲಿಕೆಯಾಗಿವೆ. ಅನುಸೂಚಿತ ಜಾತಿಗೆ ಮೀಸಲಾದ ೨೫೧ ಸ್ಥಾನಗಳಿಗೆ ೯೫೯ ನಾಮಪತ್ರಗಳು, ಅನುಸೂಚಿತ ಪಂಗಡಕ್ಕೆ ಮೀಸಲಾದ ೧೨೪ ಸ್ಥಾನಗಳಿಗೆ ೪೦೮ ನಾಮಪತ್ರಗಳು, ಹಿಂದುಳಿದ ಅ ವರ್ಗದ ೪೧೦ ಸ್ಥಾನಗಳಿಗೆ ೧೫೩೧ ನಾಮಪತ್ರಗಳು, ಹಿಂದುಳಿದ ಬ ವರ್ಗದ ೧೦೮ ಸ್ಥಾನಗಳಿಗೆ ೪೪೭ ನಾಮಪತ್ರಗಳು ಹಾಗೂ ಸಾಮನ್ಯ ವರ್ಗದ ೬೫೦ ಸ್ಥಾನಗಳಿಗೆ ೨೮೯೮ ನಾಮಪತ್ರಗಳು ಸಲ್ಲಿಕೆಯಾಗಿವೆ.
ತಾಲೂಕಾ ವಾರು ಒಟ್ಟಾರೆ ನಾಮಪತ್ರಿಕೆ ಸಲ್ಲಿಕೆ ವಿವರ ಇಂತಿದೆ.
ಗದಗ : ೨೪ ಗ್ರಾಮ ಪಂಚಾಯತ್ಗಳ ೧೦೪ ವಾರ್ಡುಗಳಲ್ಲಿರುವ ೩೯೧ ಸದಸ್ಯ ಸ್ಥಾನಕ್ಕೆ ೧೪೮೧ ನಾಮಪತ್ರಗಳು ಸಲ್ಲಿಕೆಯಾಗಿವೆ.
ಶಿರಹಟ್ಟಿ: ೨೩ ಗ್ರಾಮ ಪಂಚಾಯತ್ಗಳ ೧೦೨ ವಾರ್ಡುಗಳಲ್ಲಿರುವ ೩೨೪ ಸದಸ್ಯ ಸ್ಥಾನಗಳಿಗೆ ೧೩೭೬ ನಾಮಪತ್ರಗಳು ಸಲ್ಲಿಕೆಯಾಗಿವೆ.
ಮುಂಡರಗಿ: ೧೫ ಗ್ರಾಮ ಪಂಚಾಯತ್ಗಳ ೭೪ ವಾಡುಗಳಲ್ಲಿರುವ ೨೪೭ ಸದಸ್ಯ ಸ್ಥಾನಗಳಿಗೆ ೯೩೪ ನಾಮಪತ್ರಗಳು ಸಲ್ಲಿಕೆಯಾಗಿವೆ.
ರೋಣ: ೨೮ ಗ್ರಾಮ ಪಂಚಾಯತ್ಗಳ ೧೩೩ ವಾರ್ಡುಗಳಲ್ಲಿರುವ ೪೩೮ ಸದಸ್ಯ ಸ್ಥಾನಗಳಿಗೆ ೧೮೧೦ ನಾಮಪತ್ರಗಳು ಸಲ್ಲಿಕೆಯಾಗಿವೆ.
ನರಗುಂದ: ೧೨ ಗ್ರಾಮ ಪಂಚಾಯತ್ಗಳ ೪೭ ವಾರ್ಡುಗಳಲ್ಲಿರುವ ೧೫೭ ಸದಸ್ಯ ಸ್ಥಾನಗಳಿಗೆ ೬೪೨ ನಾಮಪತ್ರಗಳು ಸಲ್ಲಸಲ್ಪಿಟ್ಟಿವೆ.
ಜಿಲ್ಲೆಯ ೧೦೬ ಗ್ರಾಮ ಪಂಚಾಯತ್ಗಳ ಪೈಕಿ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮ ಪಂಚಾಯತ್, ಗದಗ ತಾಲೂಕಿನ ಹರ್ಲಾಪೂರ ಗ್ರಾಮ ಪಂಚಾಯತ್, ರೋಣ ತಾಲೂಕಿನ ಕುಂಟೋಜಿ ಹಾಗೂ ರಾಜೂರು ಗ್ರಾಮ ಪಂಚಾಯತ್ ಸೇರಿದಂತೆ ಒಟ್ಟು ೪ ಗ್ರಾಮ ಪಂಚಾಯತಗಳ ಅವಧಿ ಪೂರ್ಣಗೊಳ್ಳದಿದ್ದುದರಿಂದ ಅಲ್ಲಿ ಚುನಾವಣೆ ಜರುಗುವುದಿಲ್ಲ. ಇಂದು (ದಿ: ೨೯) ನಾಮಪತ್ರ ಪರಿಶೀಲನಾ ಕಾರ್ಯ ಜರುಗಲಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಮೇ೩ ಕೊನೆಯದಿನವಾಗಿರುತ್ತದೆ.