ಮಂಗಳೂರು, ನ.೧೭: ಭಯೋತ್ಪಾದನೆ ಒಂದು ಧರ್ಮಕ್ಕೆ ಸೀಮಿತ ದಾದುದಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಒಂದು ಧರ್ಮದವರು ಇನ್ನೊಂದು ಧರ್ಮದ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿ ನಡೆಸುವುದು ಕೂಡ ಭಯೋತ್ಪಾದನಾ ಕೃತ್ಯ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪಂಜಿಮೊಗರು ಡಿವೈಎಫ್‌ಐ ಘಟಕದ ದಶಮಾನೋತ್ಸವದ ಅಂಗವಾಗಿ ನಡೆದ ‘ಸೌಹಾರ್ದ ಸಮ್ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶಾದ್ಯಂತ ಪಸರಿಸಿರುವ ಭಯೋ ತ್ಪಾದನಾ ಕೃತ್ಯವನ್ನು ತಡೆಗಟ್ಟಲು ಎಲ್ಲ ಮಾನಯ ಮನಸ್ಸುಗಳು ಒಂದಾಗ ಬೇಕು ಎಂದು ಎಂದು ಸ್ವಾಮೀಜಿ ಕರೆ ನೀಡಿದರು.
ಘಟಕದ ಅಧ್ಯಕ್ಷ ಅಹ್ಮದ್ ಬಶೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಎನ್.ಎಲ್.ಭರತ್‌ರಾಜ್, ಕೂಳೂರು ಚರ್ಚ್‌ನ ರೆ.ಫಾ. ಜೆರಾಲ್ಡ್ ಪಿಂಟೊ, ಕೂಳೂರು ಮಸೀದಿಯ ಅಬ್ದುಲ್ ಜಬ್ಬಾರ್ ಅಶ್ರಫಿ, ವಜ್ರಕುಮಾರ್ ಕರ್ಣಂತಾಯ ಬಲ್ಲಾಳ, ವಾಮನ ಶೆಟ್ಟಿ, ಕೆ. ಅಬ್ಬಾಸ್, ರೊನಾಲ್ಡ್ ಡಿಸೋಜ, ವಾಮನ ಪೂಜಾರಿ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಖಲೀಲ್ ಸ್ವಾಗತಿಸಿದರು. ಅನಿಲ್ ಡಿಸೋಜ ವಂದಿಸಿದರು.