ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಸಿಡಿಲು ಬಡಿದು ಅಸ್ವಸ್ಥಳಾದ ವೃದ್ಧೆ

ಭಟ್ಕಳ: ಸಿಡಿಲು ಬಡಿದು ಅಸ್ವಸ್ಥಳಾದ ವೃದ್ಧೆ

Sun, 22 Nov 2009 03:10:00  Office Staff   S.O. News Service
ಭಟ್ಕಳ, ನವೆಂಬರ್ ೨೧: ಇಂದು ಮದ್ಯಾಹ್ನದ 1.30 ಸಮಯ ಬಂದ ಮಳೆ, ಗುಡುಗು ಹಾಗೂ ಸಿಡಿಲಿನ ಅಬ್ಬರಕ್ಕೆ ಇಲ್ಲಿನ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂಜ್‌ನಲ್ಲಿ ಮನೆಯೊಳಗೆ ಊಟ ಮಾಡುತ್ತಿದ್ದ ವೃದ್ಧೆಯೋರ್ವಳು ತೀವ್ರ ಅಸ್ವಸ್ಥಳಾಗಿ, ಮನೆಯಲ್ಲಿದ್ದ 7 ತಿಂಗಳ ಹಸುಳೆ ಹಾಗೂ ಅದರ ತಾಯಿ ಕೂಡಾ ಸ್ವಲ್ಪ ಅಸ್ವಸ್ಥರಾಗಿರುವ ಕುರಿತು ವರದಿಯಾಗಿದೆ. 
ತೀವ್ರ ಅಸ್ವಸ್ಥಗೊಂಡ ಚಿಕ್ಕಮ್ಮ ಗೋಯ್ದ ನಾಯ್ಕ (68) ಎನ್ನುವವಳನ್ನು ಆರೋಗ್ಯ ಕವಚ (108) ವಾಹನದಲ್ಲಿ ತಕ್ಷಣ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ನಂತರ ಆಕೆ ಚೇತರಿಸಿಕೊಂಡಿದ್ದಾಳೆ ಎನ್ನಲಾಗಿದೆ. 
 
ಸುದ್ದಿ ತಿಳಿದ ಶಾಸಕ ಜೆ.ಡಿ. ನಾಯ್ಕ ಅವರು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿಕ್ಕಮ್ಮನನ್ನು ಭೇಟಿ ಮಾಡಿ ಆಕೆಗೆ ಸಾಂತ್ವನ ಹೇಳಿದರಲ್ಲದೇ ಆಕೆಯ ಕುಟುಂಬ ಸದಸ್ಯರನ್ನು ಕಂಡು ಮಾತನಾಡಿದರು. 

Share: