ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸಕಲೇಶಪುರ: ಅಗಲಿದ ಸಾಹಸಸಿಂಹಕ್ಕೆ ಅಭಿಮಾನಿಗಳ ಶೃದ್ಧಾಂಜಲಿ

ಸಕಲೇಶಪುರ: ಅಗಲಿದ ಸಾಹಸಸಿಂಹಕ್ಕೆ ಅಭಿಮಾನಿಗಳ ಶೃದ್ಧಾಂಜಲಿ

Wed, 30 Dec 2009 18:00:00  Office Staff   S.O. News Service
ಸಕಲೇಶಪುರ, ಡಿಸೆಂಬರ್ 29:  ಚಲನಚಿತ್ರ ನಟ ವಿಷ್ಣುವರ್ದನ್ ನಿಧನಕ್ಕೆ ವಿಷ್ಣು ಅಭಿಮಾನಿ ಸಂಘ ಹಾಗೂ ಬಿಜೆಪಿ ಕಾರ್‍ಯಕರ್ತರು ಪ್ರತ್ಯೇಕವಾಗಿ ಪಟ್ಟಣದಲ್ಲಿ ಬುಧವಾರ ಶ್ರದ್ಧಾಂಜಲಿ ಅರ್ಪಿಸಿದರು. 
ಪಟ್ಟಣದ ಹಳೇ ಬಸ್ಸ್ ನಿಲ್ದಾಣದ ಹಿಂಬಾಗ ವಿಷ್ಣುವರ್ದನ್ ಅಭಿಮಾನಿ ಸಂಘದ ಅಧ್ಯಕ್ಷ ಬಾಳ್ಳು ಲಕ್ಷ್ಮಣ್ ನೇತೃತ್ವದಲ್ಲಿ ಸಂತಾಪ ಸಭೆ ನಡೆಸಿ, ವಿಷ್ಣುವರ್ದನ್ ಭಾವ ಚಿತ್ರಕ್ಕೆ ಹೂಮಾಲೆ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ ನಂತರ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. 
 
ಪಟ್ಟಣದ ಸಾಮ್ರಾಟ್ ಹೋಟೆಲ್ ಹಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಸಂತಾಪ ಸಭೆ ನಡೆಸಿ, ದಿವಂಗತ ನಟ ವಿಷ್ಣುವರ್ದನ್, ಗಾಯಕ ಸಿ.ಅಶ್ವಥ್ ಹಾಗೂ ಪಕ್ಷದ ನಾಯಕ(ವಿಧಾನ ಪರಿಷತ್ ಸದಸ್ಯ) ಎಸ್.ಕೈಲಾಷ್ ನಿಧನಕ್ಕೆ ಸಂತಾಪ ಸೂಚಿಸಿದರು. ಈ ಸಂದರ್ಭ ಪಕ್ಷದ ಅಧ್ಯಕ್ಷ ಎಚ್.ಎಸ್.ದರ್ಮರಾಜ್, ಎಚ್.ಎ.ರಾಮಚಂದ್ರೇಗೌಡ, ಹೆತ್ತೂರು ದೇವರಾಜ್, ನಾರಾಯಣ ಆಳ್ವ, ಡಿ.ದಯಾನಂದ, ರಾಜ್‌ಕುಮಾರ್ ಮುಂತಾದವರು ಹಾಜರಿದ್ದರು.


Share: