ಮುರ್ಡೇಶ್ವರ, ಜನವರಿ 5: ಮುರ್ಡೇಶ್ವರದಲ್ಲಿ ನ್ಯಾಶನಲ್ ಬಾಲಕರ ಆಂಗ್ಲ ಮಾಧ್ಯಮ ಪ್ರೌಢಶಾಲಾ ನೂತನ ಕಟ್ಟಡಕ್ಕಾಗಿ ಜನವರಿ 10 ರಂದು ಶಂಕುಸ್ಥಾಪನೆ ನಡೆಯಲಿದೆ.
ಈ ಕಟ್ಟಡದ ನಿರ್ಮಾಣಕ್ಕಾಗಿ ಎಂ.ಇ.ಎಸ್. (ಮುಸ್ಲಿಂ ಎಜುಕೇಶನ್ ಸೊಸೈಟಿ) ಪ್ರಮುಖ ಪಾತ್ರ ವಹಿಸಿದ್ದು ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಶಂಕುಸ್ಥಾಪನೆ ಜನವರಿ 10 ರ ಸಂಜೆ ನಾಲ್ಕೂವರೆ ಘಂಟೆಗೆ ನಡೆಯಲಿದ್ದು ಎಂಇಎಸ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.
ಪತ್ರಿಕಾ ಪ್ರಕಟಣೆ:
ಹೆಜೀಬ್ ಮೊಹಮ್ಮದ್ ಗೌಸ್
ಪ್ರಧಾನ ಕಾರ್ಯದರ್ಶಿ, ಎಂ.ಇ.ಎಸ್.