ಬೆಂಗಳೂರು, ಫೆಬ್ರವರಿ 19: ಪದವಿ ಹಾಗೂ ವಿಶ್ವವಿದ್ಯಾಲಯಗಳ ಪ್ರ್ರಾಧ್ಯಾಪರುಗಳಿಗೆ ಯುಜಿಸಿ ವೇನತ ಪರಿಷ್ಕರಣೆಯನ್ನು ಕೃಷಿ ಹಾಗೂ ತೋಟಗಾರಿಕೆ ವಿಶ್ವ ವಿದ್ಯಾಲಯಗಳಿಗೆ ಅನ್ವಯವಾಗುವಂತೆ ಏರಿಸಲು ರಾಜ್ಯ ಸರ್ಕಾರ ನಾಳೆ ವಿದ್ಯುಕ್ತವಾಗಿ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ.
ಸಹಕಾರ ಸಂಘಗಳ ಪುನಚ್ಚೇತನಕ್ಕೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ಹಾಗೂ ವೈದ್ಯನಾಥನ್ ಸಮಿತಿಯ ವರದಿ ಅನುಷ್ಠಾನಕ್ಕೆ ಸಂಪುಟ ಸಭೆ ಅನುಮತಿ ನೀಡಲಿದೆ.
ಮೈಸೂರು ರಸ್ತೆಯಲ್ಲಿ ಕೊಕೋಲಾ ಕಾರ್ಖಾನೆಯ ಮುಂದೆ ಇರುವ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಅನುಮತಿ ನೀಡುವ ಸಾಧ್ಯತೆಗಳಿವೆ.
ಕರ್ನಾಟಕ ಭೂಸುದಾರಣೆಯ ೧೯೬೧ ರ ೧೦೯ನೇ (೧ಎ) ಅನ್ವಯ ಉನ್ನತ ಮಟ್ಟದ ಸಮಿತಿಯ ಶಿಪಾರಸ್ಸುಗಳನ್ನು ಸಂಪುಟ ಸಭೆ ಅನುಮೋದನೆ ಮಾಡಿ ಅಕ್ರಮ ಸಕ್ರಮವನ್ನು ಮಸೂದೆಮಂಡಿಸಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯೆತೆಗಳಿವೆ.