ಚಿಕ್ಕಬಳ್ಳಾಪುರ ಡಿಸೆಂಬರ್ ೦೨: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣಿಕೆ ಹಾಗೂ ಗಣಿಗಾರಿಕೆಗೆ ಅಸ್ಪದವಿಲ್ಲವೆಂದು ಜಿಲ್ಲಾಧಿಕಾರಿ ಅನ್ವರ್ ಪಾಷ ತಿಳಿಸಿದರು.
ಕಾನೂನಿನ ಪ್ರಕಾರ ಪಟ್ಟಾ ಭೂಮಿಯಲ್ಲಿ ಕೇವಲ ಮೂರು ಅಡಿಗಳು ಮಾತ್ರ ಮರಳು ತೆಗೆಯಬೇಕಾಗಿದೆ ಆದರೆ ಗೌರಿಬಿದನೂರು ತಾಲ್ಳೂಕಿನಲ್ಲಿ ಮೂವತ್ತು ಅಡಿಗಳಿಂದ ಜೆ.ಸಿ.ಬಿ.ಗಳಿಂದ ಮರಳು ತೆಗೆದು ಸಾಗಿಸುತ್ತಿರುವುದು ಕಂಡು ಬಂದಿದೆ ಇಂತಹ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವುವರ ಮೇಲೆ ಮೊಕ್ಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ ಹಾಗೂ ನದಿಗಳಿಂದ ಮರಳು ಸಾಗಣಿಕೆಗೆ ಸಾರ್ವಜನಿಕರು ಬಿಡುತ್ತಿಲ್ಲ. ಇದರಿಂದ ಜನರಿಗೆ ಅರಿವು ಬಂದಿದ್ದು ಪಟ್ಟಾಭೂಮಿ ಮರಳು ದಂಧೆಯನ್ನು ನಿಲ್ಲಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೌರಿಬಿದನೂರು ತಾಲ್ಲೂಕಿನಲ್ಲಿ ವ್ಯಾಪಕವಾಗಿ ಪಟ್ಟಾ ಭೂಮಿಯಲ್ಲಿ ನಲವತ್ತು ಅಡಿಗಳಷ್ಟು ಕಂದರಗಳನ್ನು ನಿರ್ಮಿಸಿ ಮರಳು ಸಾಗಣಿಕೆ ಮಾಡಿದ್ದಾರೆ ಇದರಿಂದ ಅಂತರ ಜಲ ಮಟ್ಟ ಕುಸಿಯುತ್ತಿದೆ ಮತ್ತು ಪರಿಸರಕ್ಕೆ ದಕ್ಕೆಯುಂಟಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಇಡೀ ದಿನ ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ, ಕದಿರೇನಹಳ್ಳಿ, ಮಾದನಹಳ್ಳಿ, ವಿದುರಾಶ್ವಥ ಗ್ರಾಮಗಳಿಗೆ ಭೇಟಿ ಮಾಡಿ ಅಕ್ರಮ ಗಣಿಗಾರಿಕೆ ಪ್ರದೇಶಗಳನ್ನು ವೀಕ್ಷಿಸಿ
ಕಟ್ಟುನಿಟ್ಟಿ ಕ್ರಮಗಳನ್ನು ಕೈಗೊಳ್ಳಲು ಪೋಲಿಸ್ ಇಲಾಖೆ, ಕಂದಾಯ ಇಲಾಖೆ .ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್, ತಾಹಶೀಲ್ದಾರ್ ಡಾ|| ಸುಧಾ, ವಾರ್ತಾಧಿಕಾರಿ ಸಿ.ಎಂ.ರಂಗಾರೆಡ್ಡಿ, ಉಪಸ್ಥಿತರಿದ್ದರು. -