ಉತ್ತರಕನ್ನಡ ಜಿಲ್ಲಾ ಕಾಂಗ್ರೇಸ್ ಗೆ ಆನೆ ಬಲ
ಕುಮಟಾ: ಜೆ.ಡಿ.ಎಸ್. ಮುಖಂಡ ಹಾಗೂ ಭಟ್ಕಳದ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಜೆ.ಡಿ.ಎಸ್ ಪಕ್ಷ ತ್ಯಜಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಉಪಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು.
ಪಕ್ಷಕ್ಕೆ ಆದರಪೂರ್ವಕವಾಗಿ ಬರಮಾಡಿಕೊಂಡ ಉಪಮುಖ್ಯಮಂತ್ರಿ ಕಾಂಗ್ರೇಸ್ ಪಕ್ಷದ ಶಾಲು ಹಾಕಿ ಸ್ವಾಗತಿಸಿದರು.
ಎಚ್ಡಿ ದೇವೇಗೌಡ ಹಾಗೂ ಕುಮಾರ ಸ್ವಾಮಿಯವರ ಕಟ್ಟಾ ಅಭಿಮಾನಿಯಾಗಿದ್ದ ಇನಾಯತುಲ್ಲಾ ಶಾಬಂದ್ರಿ ರಾಜಕೀಯ ಆರಂಭಿಸಿದ್ದು ಜೆ.ಡಿ.ಎಸ್ ಪಕ್ಷದಿಂದ ಭಟ್ಕಳ ತಾಲೂಕಿನಲ್ಲಿ ಜೆಡಿಎಸ್ ಅಂದ್ರೆ ಇನಾಯತುಲ್ಲಾ ಶಾಬಂದ್ರಿ ಎನ್ನುವಂತಹ ಸ್ಥಿತಿ ಇತ್ತು. ಆದರೆ ಇಂದು ಭಟ್ಕಳದ ಇನಾಯತುಲ್ಲಾ ಶಾಬಂದ್ರಿ ಕಾಂಗ್ರೇಸ್ ಪಕ್ಷ ಸೇರಿದ್ದರಿಂದಾಗಿ ಕಾಂಗ್ರೇಸ್ ಪಕ್ಷದಲ್ಲಿ ಬಲ ಬಂದಿದೆ. ಹಾಗೂ ಜೆ.ಡಿ.ಎಸ್ ಅನಾಥವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.