ಹಾಸನ,ಡಿಸೆಂಬರ್ ೭: ಲಿಬರ್‍ಹಾನ್ ಆಯೋಗದ ವರದಿ ಅನುಷ್ಟಾನಗೊಳಿಸಬೇಕು ಹಾಗೂ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಹಾಸನದಲ್ಲಿ ಸೋಮವಾರ ಪ್ರತಿಭಟನೆ ಡನೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಗಮಿಸಿದ ಪ್ರತಿಭಟನಾಕಾರರು ಲಿಬರ್‍ಹಾನ್ ಸಮಿತಿಯ ವರಿಯನ್ನು ಶೀಘ್ರವೇ ಅನುಷ್ಟಾನಗೊಳಿಸುವಂತೆ ಘೋಷಣೆ ಕೂಗಿದರು.
ಲಿಬರ್‍ಹಾನ್ ಆಯೋಗದಲ್ಲಿ ಸೂಚಿಸಿರುವ ಎಲ್ಲಾ ಆರೋಪಿಗಳು ಎಲ್ಲೇ ಪ್ರಭಾವಿಗಳಾಗಿದ್ದರೂ, ಅವರ ವಿರುದ್ಧ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಂಡು ಬಂಧನಕ್ಕೊಳ ಪಡಿಸಬೇಕು. ಬಾಬರಿ ಮಸೀದಿ ಧ್ವಂಸ ಪ್ರಕರಣದ ಯಾವುದೇ ಆರೋಪಿಗೆ ಜನಪ್ರತಿನಿಧಿಗಳ ತರದಲ್ಲಿ ಮುಂದುವರಿಯಲು ಅವಕಾಶ ನೀಡದೆ ಅವರ ಸ್ಥಾನಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯ ಪಡಿಸಿದರು.
ಆರೋಪಿಗಳು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬೇಕು. ಡಿ.6 ನ್ನು ಕರಾಳ ದಿನವೆಂದು ಘೋಷಿಸಬೇಕು. ಬಾಬರಿ ಮಸೀದಿ ಇದ್ದ ಸ್ಥಳವನ್ನು ಮುಸ್ಲಿಂ ಸಮುದಾಯಕ್ಕೆ ಹಸ್ತಾಂತರಿಸಬೇಕು. ಬಾಬರಿ ಮಸೀದಿ ಇರುವ ಜಾಗದಲ್ಲಿಯೇ ಮಸೀದಿಯನ್ನು ಪುನರ್ ನಿರ್ಮಾಣ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಸೂಫಿ ಇಬ್ರಾಹಿಂ, ಹಿದಾಯತ್ ಉಲ್ಲಾ, ಇಮ್ರಾನ್, ಫರೀದ್, ವಾಹಿದ್ ವಹಿಸಿದ್ದರು.