ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜೀವನದಲ್ಲಿ ಜಿಗುಪ್ಸೆಗೊಂಡ ಕೆಲಸ ಮಾಡುತ್ತಿದ್ದ ಲಾಡ್ಜ್‌ನಲ್ಲೇ ಯುವಕ ನೇಣಿಗೆ ಶರಣು

ಜೀವನದಲ್ಲಿ ಜಿಗುಪ್ಸೆಗೊಂಡ ಕೆಲಸ ಮಾಡುತ್ತಿದ್ದ ಲಾಡ್ಜ್‌ನಲ್ಲೇ ಯುವಕ ನೇಣಿಗೆ ಶರಣು

Sat, 30 Nov 2024 06:21:30  Office Staff   S O News

ಭಟ್ಕಳ: ತಾನು ಮಾಡಿದ ಸಾಲವನ್ನು ತೀರಿಸಲಾಗದೆ. ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ಶಂಸುದ್ದಿನ್ ಸರ್ಕಲ್ ಸಮೀಪವಿರುವ  ಆತ ಕೆಲಸ ಮಾಡುತ್ತಿದ್ದ  ಅಲ್ ಮನಲ್ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆಡಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸಂದೀಪ ತಿಮ್ಮಯ್ಯ ನಾಯ್ಕ ಹೆಬಳೆ ಹೊನ್ನೆಗದ್ದೆ ನಿವಾಸಿ ಎಂದು ತಿಳಿದು ಬಂದಿದೆ. ಈತ ರಾತ್ರಿ 7 ಗಂಟೆಯಿಂದ ಬೆಳ್ಳಿಗ್ಗೆ 7 ಗಂಟೆಯ ತನಕ ಈ ಲಾಡ್ಜ್ ನಲ್ಲಿ ಪಾರ್ಟೈಮ್ ಕೆಲಸ ಮಾಡುತ್ತಿದ್ದನು. ಬಳಿಕ ಬೆಳ್ಳಿಗ್ಗೆ ತೆಂಗಿನ ಗುಂಡಿಯ ಖಾಸಗಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಎಂದಿನಂತೆ ಲಾಡ್ಜ್ ಗೆ ಕೆಲಸಕ್ಕೆ ಬಂದವನು ಶುಕ್ರವಾರ ಬೆಳ್ಳಿಗ್ಗೆ 7 ಗಂಟೆಗೆ ಮನೆಗೆ ಹೋದವನು ಬಳಿಕ ಮತ್ತೆ ಲಾಡ್ಜ್ ಗೆ ಬಂದವನು ತಾನು ಮಾಡಿದ ಸಾಲವನ್ನು ತೀರಿಸಲಾಗದೆ. ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಶುಕ್ರವಾರ ಬೆಳ್ಳಿಗ್ಗೆ   ಲಾಡ್ಜ್ ನ ರೂಮ್ ನಂಬರ 307 ರಲ್ಲಿ ಸಿಲಿಂಗ್ ಫ್ಯಾನ್ ಗೆ ವೈಯರ್ ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ۔

ಸ್ಥಲಕ್ಕೆ ನಗರ ಠಾಣೆಯ ಪಿ.ಎಸ್.ಐ ನವೀನ ನಾಯ್ಕ, ವಿಧಿ ವಿಜ್ಞಾನ ಸ್ಥಳ ಪರಿಶೀಲನಾಧಿಕಾರಿ ರಮೇಶ, ನಗರ ಠಾಣೆಯ ಸಿಬ್ಬಂದಿಗಳಾದ  ದೀಪಕ ನಾಯ್ಕ ,ಮದಾರಸಾಬ ಚಿಕ್ಕೇರಿ, ದೇವು ನಾಯ್ಕ, ಕಿರಣ ಪಾಟೀಲ್, ವಿಜಯ ಜಾಧವ ಉಪಸ್ಥಿತಿ ಇದ್ದರು ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಮೃತ ಸಹೋದ ಶೇಖರ ತಿಮ್ಮಯ್ಯ ನಾಯ್ಕ ದೂರು ದಾಖಲಿಸಿದ್ದಾರೆ.

ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವರಿ ಸಚಿವ ಮಂಕಾಳ ವೈದ್ಯ ಸರ್ಕಾರಿ ಆಸ್ಪತ್ರೆಯ  ಶವಗಾರಕ್ಕೆ ತೆರಳಿ  ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ۔


Share: