ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜಾನುವಾರು ಅಕ್ರಮ ಸಾಗಾಟ: ಇಬ್ಬರ ಬಂಧನ

ಜಾನುವಾರು ಅಕ್ರಮ ಸಾಗಾಟ: ಇಬ್ಬರ ಬಂಧನ

Tue, 31 Oct 2023 06:16:26  Office Staff   SO News

ಭಟ್ಕಳ: ಪರವಾನಗೆ ಇಲ್ಲದೆ ಅಹಿಂಸಾತ್ಮಕವಾಗಿ ಸಾಗಟ ಮಾಡುತ್ತಿದ್ದ ಜಾನುವಾರುಗಳನ್ನು ಹಿಂದೂ ಸಂಘಟನೆಯ ಸದಸ್ಯರ ಸಹಾಯದಿಂದ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಟ್ಕಳ ಪಟ್ಟಣದ ಗುಳಮಿ, ಬೆಳಲಖಂಡದಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದೆ. ಜಾಲಿ ಬಬ್ಬನಕಲ್ ನಿವಾಸಿ ಇರ್ಫಾನ್ ಅಬ್ದುಲ್ ಸತ್ತಾರ, ಭಟ್ಕಳ ಮೂಸಾ ನಗರ ನಿವಾಸಿ ಅಸ್ಲಾಂ ಮುಸ್ತಾಫ ಸೈಯದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಂದ್ರಾ ಬುಲೆರೊ ವಾಹನದಲ್ಲಿ ೨ದನ, ಎರುಡು ಕರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತಿತ್ತು. ಹಿಂದೂ ಸಂಘಟನೆಯ ಸದಸ್ಯರು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸುಮಾರು ೮ಸಾವಿರೂ ಮೌಲ್ಯದ ಜಾನುವಾರುಗಳನ್ನು ರಕ್ಷಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಭೆಯಲ್ಲಿ ದೂರು ದಾಖಲಾಗಿದೆ.


Share: