ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂಜತ್ತೂರು: ಮಿಗತೆ ಭೂಮಿ ವಿತರಣೆಯಲ್ಲಿ ಅವ್ಯವಹಾರದ ಆರೋಪ: ಧರಣಿ

ಕುಂಜತ್ತೂರು: ಮಿಗತೆ ಭೂಮಿ ವಿತರಣೆಯಲ್ಲಿ ಅವ್ಯವಹಾರದ ಆರೋಪ: ಧರಣಿ

Wed, 13 Jan 2010 18:04:00  Office Staff   S.O. News Service
ಮಂಜೇಶ್ವರ, ಜ.13: ಸರಕಾರ ವಿತರಿಸಿದ ಮಿಗತೆ ಭೂಮಿ ವಿತರಣೆಯಲ್ಲಿ ಅವ್ವಯವಹಾರ ನಡೆದಿದೆ. ಅರ್ಹರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ತೂಮಿನಾಡು ನಾಗರಿಕ ಸಮಿತಿ ಹಾಗೂ ಕುಟುಂಬ ಶ್ರೀ ಸಮಿತಿ ಸದಸ್ಯರು ಕುಂಜತ್ತೂರು ಗ್ರಾಮ ಕಚೇರಿ ಎದುರು ಧರಣಿ ನಡೆಸಿದರು.

ಧರಣಿಯನ್ನು ಉದ್ಘಾಟಿಸಿದ ಸಮಾಜ ಸೇವಕ ಹರೀಶ್ ಶೆಟ್ಟಿ ಮಾಡ ಮಾತನಾಡಿ, ಅವರು ಮಿಗತೆ ಭೂಮಿ ಹಂಚಿಕೆಯಲ್ಲಿ ರಾಜಕೀಯ ನಡೆದಿದೆ. ಆಡಳಿತಗಾರರ ಪ್ರಭಾವದಿಂದ ಕೆಲವರು ಭೂಮಿ ಪಡೆದಿದ್ದು, ಅರ್ಹರಾದವರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.

 ತೂಮಿನಾಡಿನ ಪಳ್ಳ ಎಂಬಲ್ಲಿ ಸುಮಾರು ೭೭ ಎಕರೆ ಮಿಗತೆ ಭೂಮಿಯನ್ನು ಬಡವರಿಗೆ ವಿತರಿಸಲು ಮೀಸಲಿಡಲಾಗಿತ್ತು. ಈ ಭೂಮಿಯನ್ನು ಬಡವರಿಗೆ ನೀಡದೆ ಶ್ರೀಮಂತರಿಗೆ ನೀಡಲಾಗಿದೆ ಎಂದು ನಾಗರಿಕ ಸಮಿತಿ ಆರೋಪಿಸಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಗ್ರಾಮಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕ ಸಮಿತಿ ಪದಾಧಿಕಾರಿಗಳು ದೂರಿದ್ದಾರೆ.

ಮಧು ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಅಧ್ಯಕ್ಷೆ ಗೀತಾ ವಿ.ಎಸ್. ಹಾಗೂ ನಾಗರಿಕ ಸಮಿತಿಯ ರಹಿಮಾನ್ ಉದ್ಯಾವರ, ಪಂಚಾಯತ್ ಸದಸ್ಯ ರಂದ್ರ ಶೆಟ್ಟಿ, ನೇತೃತ್ವಧರಣಿಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ನಾಗರಿಕರು ಭಾಗವಹಿಸಿದ್ದರು. ಮಮತಾ ಸ್ವಾಗತಿಸಿದರು  ಹರಿಣಾಕ್ಷಿ ವಂದಿಸಿದರು.

Share: