ಬೆಂಗಳೂರು, ಅ.16: ‘ಇಸ್ಕಾನ್’ ಸಂಸ್ಥೆ ಬಡ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸುಮಾರು ೩೦೦ ಟನ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟಕ್ಕೆ ಮುಂದಾಗಿದೆ ಎಂದು ಆರೋಪ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಕುರಿತು ಸಮಗ್ರ ತನಿಖೆ ನಡೆಸಿ ತಕ್ಷಣವೇ ಇಸ್ಕಾನ್ ಮುಖ್ಯಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಬಾವಿ ಎರಡನೆ ಹಂತದಲ್ಲಿನ ಕನ್ಯಾಕುಮಾರಿ ಕಲ್ಯಾಣ ಮಂಟಪದಲ್ಲಿ ಇಸ್ಕಾನ್, ಪಡಿತರ ಇಲಾಖೆ ಬಿಸಿಯೂಟ ಯೋಜನೆಗೆ ೨ ರೂಪಾಯಿಗೆ ಒಂದು ಕೆಜಿ ಯಂತೆ ಖರೀದಿಸಿದ್ದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ೧೫ರೂ. ಒಂದು ಕೆಜಿಯಂತೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ಕೆಪಿಸಿಸಿ ಪತ್ತೆ ಹಚ್ಚಿದೆ.
ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಇಸ್ಕಾನ್ ಸಂಸ್ಥೆ ಕಲ್ಯಾಣ ಮಂಟಪದಲ್ಲಿ ಬಡ ಮಕ್ಕಳ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಂಸ್ಥೆಯ ಮಧುಪಂಡಿತ್ ದಾಸ್ ಮತ್ತು ಚಂಚಲಪತಿ ದಾಸ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ನೆರೆ ಹಾವಳಿಗೆ ಪರಿಹಾರಕ್ಕಾಗಿ ಅಕ್ಕಿ ಕಳುಹಿಸಲು ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅಕ್ಕಿ ಖರೀದಿಗೆ ಹುಡುಕಾಟ ನಡೆಸಿದಾಗ ಅಕ್ರಮ ಬಯಲಾಗಿದೆ. ಈ ಕುರಿತು ಆಹಾರ ಇಲಾಖೆಗೆ ದೂರು ನೀಡಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತ ಮದನ್ ಗೋಪಾಲ್ ನಿನ್ನೆ ರಾತ್ರಿಯೇ ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಇಟ್ಟು ದೊಡ್ಡ ಪ್ರಮಾಣದ ಅಕ್ರಮ ಅಕ್ಕಿ ದಾಸ್ತಾನು ಪತ್ತೆಯಾದ ಹಿನ್ನೆಲೆಯಲ್ಲಿ ತಕ್ಷಣವೇ ಇಸ್ಕಾನ್ ಸಂಸ್ಥೆ ನೀಡಿರುವ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಸರಕಾರ ಹಿಂಪಡೆದುಕೊಳ್ಳಬೇಕು. ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರಾದ ಮಧು ಪಂಡಿತ್ ದಾಸ್ ಮತ್ತು ಚಂಚಲಪತಿ ದಾಸ್ ಅವರನ್ನು ಬಂಧಿಸಿ ತನಿಖೆಗೆ ಗುರಿಪಡಿಸಬೇಕು ಎಂದು ಶಿವಕುಮಾರ್ ಕೋರಿದರು.
ಕೆಪಿಸಿಸಿಯ ನೂರಾರು ಕಾರ್ಯಕರ್ತರು ಧರಣಿ ನಡೆಸಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದರು. ಧರಣಿನಿರತರು ಇಸ್ಕಾನ್ ಸಂಸ್ಥೆಯ ಅವ್ಯವಹಾರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.