ಭಟ್ಕಳ 29, ಮಾನಸಿಕವಾಗಿ ಅಸ್ವಸ್ಥಗೊಂಡ ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಇಂದು ಜರುಗಿದೆ. ಮೃತ ವ್ಯಕ್ತಿಯನ್ನು ತಲೂಕಿನ ಬೆಂಗ್ರೆಯ ನಿವಾಸಿ ನಿತ್ಯಾನಂದ ಪರಮೇಶ್ವರ ದೇವಾಡಿಗ ಎನ್ನಲಾಗಿದೆ. ಈತನು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಎನ್ನಲಾಗಿದ್ದು ಬಾವಿಯಲ್ಲಿ ಬಿದ್ದು ಸಾವನ್ನಪ್ಪದ್ದಾನೆ ಸ್ಥದಲ್ಲಿದ್ದ ಜನರು ಈತನ್ನು ಬದುಕಿಸಲು ಪ್ರಯತ್ನಪಟ್ಟರು ಅದು ಸಫಲವಾಗಲಿಲ್ಲ ಎನ್ನಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ